...

10 views

ಕವನ ಸಂಕಲನ
ನಮ್ಮೂರ ಹಣೆಬಾರ ಗಿಚಿದವನಾರೋ?

"ಊರೂರ ಸುತ್ತಿರೆ ನೆಮ್ಮದಿ ನಮಗಿಲ್ಲ
ಬ್ಯಾಗಿಡಿದು ಬೆಂಗ್ಳೂರಿಗೆ ನನಗೆಳೆಯರೆಲ್ಲ
ಬೆಂಗ್ಳೂರಲೇನಿಹುದೋ ನಾಕಾಣೆನಲ್ಲ
ನನ್ನುಡುದಾರವೊಂದು ಇಲ್ಲೇ ಕಳೆದಿಹುದಲ್ಲ
ನಮ್ಮೂರ ಹಣೆಬಾರ ಗಿಚಿದವನಾರೋ?

"ಎಲ್ಲೆಲ್ಲೂ ನೋಡಿರೆ ಬರಡು ಭೂಮಿ ಎಲ್ಲ
ಕಾನನವೆಂಬುದು ನಮಗೆ ಕನಸಿನ ಮಾತೆಲ್ಲ
ಇರುವವಲ್ಲಲ್ಲಿ ಮರ ಬೇವಿರಳವಿಲ್ಲೆಲ್ಲ
ಅದು ಕೂಡ ನಿಂಬೆಗೆ ಸಾಲದೆ ಹೋಯ್ತಲ್ಲ
ನಮ್ಮೂರ ಹಣೆಬಾರ ಗಿಚಿದವನಾರೋ?

"ಮದ್ಯಾಹ್ನದಿ ಚೊಂಬಿಡಿದು ಹೊರಗೆ ನಡೆದಿರಲು
ಬಿಸಿಲಿಗೆ ಬೆಂದಂತಿದೆ ಭೂತಾಯಿಯ ಮಡಿಲು
ಹೊರಗಿಡೇ ಹೆಜ್ಜೆ ಸುಟ್ಟ ಬದನೆಕಾಯಿ ಕಾಲು
ಎತ್ತ ಹೋವುದು ತಿಳಿಯದು ಒತ್ತಡ ತಡೆಯಲು
ನಮ್ಮೂರ ಹಣೆಬಾರ ಗಿಚಿದವನಾರೋ?

"ಮುಂಜಾನೆದ್ದು ಕೋಳಿ ಕೂಗುವ ಸದ್ದು
ರೋಡಲಿ ನಡೆಯಲು ವಾಸನೆಗೇನು ಮದ್ದು
ಮುಖಕಾಣದ ಕತ್ತಲೆ ಕುಡಿವರು ಕದ್ದು
ಹಳ್ಳಿ ಊರುಗಳು ನೋಡು ನಿಂತಿಹವು ಗೆದ್ದು
ನಮ್ಮೂರ ಹಣೆಬಾರ ಗಿಚಿದವನಾರೋ?

"ಬದುಕುವುದೇ ಕಷ್ಟ ಹೀಗಾದರೆ ಎಲ್ಲ
ಹೇಗೆ ಸಾಗುವವೋ ಬಾಳಿನ ಬಂಡಿಗಳೆಲ್ಲ
ಏನೇನೋ ಕನಸೋತ್ತ ನನಗೆಳೆಯರೆಲ್ಲ
ಮನದ ಭಾವನೆಗಳೇ ಬರಡಾಗಿಹವಲ್ಲ
ನಮ್ಮೂರ ಹಣೆಬಾರ ಗಿಚಿದವನಾರೋ?

ಒಂದೊಂದು ಮತಕ್ಕೂ ಏನೇನೋ ಕಸರತ್ತು
ಪಂಚಾಯ್ತಿ ಚುನಾವಣೆಗೆ ಖರ್ಚೊಂದು ಇತ್ತು
ಸುಮ್ಮನೆ ನಿಂತವರು ದುಡ್ಡಿನ ಸೋತ್ತು
ಎಂಥಹ ಮೋಜಿದೂ ನನಗೀಗ ತಿಳಿದಿರಲು
ಗೆಳೆಯಾ.. ನಮ್ಮೂರ ಹಣೆಬಾರ ಗಿಚಿದವನಾರೋ?

✍️ ಅಲೆಮಾರಿ
***************************


"ಕೃಷ್ಣನ ಕನಸು"

ಎನ್ನ ಕನಸುಗಳೆಲ್ಲ ಮರಳಿನುಂಡೆಗಳಂತೆ
ಎಚ್ಚರದೊಳೆನ್ನಾರು ಎಣಿಸಲಾಗದಯ್ಯ
ಎತ್ತರ ಬಿತ್ತರದಿ ಕುಣಿದು ಬಂದೆ ನಾನು
ಕೃಷ್ಣಗನಸಿಂದೆನ್ನ  ತಡೆಯಲಾಗದಯ್ಯ

ಪಿಳ್ಳಂಗೋವಿಂಪಿಡಿದ ಪಿಳ್ಳೆಲೋಲ ನಾನೇ
ಹಾದಿ ಬೀದಿ ಜನ ಪಿಳ್ಪಿಳಿ ನೋಡಿಹರಯ್ಯ
ಎನ್ನಾಗಮ ನೆನೆದು ಹೊಸರಂಗು ಬಿದಿಗಳೆಲ್ಲ
ರಂಗಿತ್ತೆಂಗಳೆಯರು ಕಾದು ನಿಂತಿಹರಯ್ಯ

ರಂಗಿನೊಂಬೆಗಳು ಸಿಹಿಯ ತಿಂಡಿಗಳು
ಸಿಗದ ಬೆಣ್ಣೆಯನ್ನರಸಿ ನಾನಿಂತೆನಯ್ಯ
ಕಣ್ಣ ತಂಪಿನಲ್ಲಿ ಊರ ಓಕುಳಿಯೂ
ಹಿಂದು ಮುಂದೆಂದೂ ನೋಡೆನಯ್ಯ

ಊರ ಬಾಗಿಲಲೆನ್ನ ರಾಧೆಯಿಂತಿಹಳೆಂದು
ಓಡೇ ಕೊಳಲನ್ನಿಡಿದು ರಾಗದಿಂಪಿಲ್ಲಯ್ಯ
ರಾಧರಾಣಿ ಅಲ್ಲ ಕಂಡಳಿಂಕದ ರಮಣಿ
ಘಾಸಿ ಹೋದಳೆನ್ನ ತಿರುಗಿ ತಿರುಗಯ್ಯ

ಕನಸು ಕಣ್ಮುತ್ತಾಗಿ ಜಾರಿ ಕರೆಯುತ್ತಿರಲು
ಜಾರಿದನಿಯಿಡಿದು ನೋಡಲಾರೆನಯ್ಯ
ವಿರಹ ಸಹಿಸೆಂದೆನಗೆ ಭಾದೆಯೋರೆಸಿದವ
- ಳ ನಿಜದ ಕಹಿಸತ್ಯ ಮರೆಯೋದೆಗಯ್ಯ

✍️ ಅಲೆಮಾರಿ
**************************



"ಕಾಮನಬಿಲ್ಲು"
..........................
ಅತ್ತ ನೇಸರನಾಟ ಇತ್ತ ಜವರನ ಓಟ
ಅವನಿಗೆ ಮುದತರುವ ಸುಂದರ ನೋಟ
ಸಪ್ತರಂಗಿನ ಬಣ್ಣಗಳ ರಮಣೀಯ ನೋಟ
ಎನ್ನಲದೇನೋ ಮಧುರ ಸಿಂಚನದ ಪಟ

ನಾ ಬರುವ ದಾರಿಗೆ ರಂಗುಚೆಲ್ಲಿ
ದೂರದಿ ಭುವಿಗೆ ನಮಿಸಿ ನಿಂತಂತೆ
ಇದೇನು ಬಣ್ಣದ ಹೊಳೆಯೋ
ಇಲ್ಲ ನಭಕೇರಿಸೋ ಸುಳಿದಾರಿಯೋ

ಒಮ್ಮೆ ನಡೆಯಬೇಕಿದೆ ಆ ರಂಗುದಾರಿಯಲ್ಲಿ
ಆ ಬಣ್ಣ ತಂದು ಎನ್ಮನೇಗೆ ಬಳಿದು
ನಲಿಯಬೇಕಿದೆ ಒಮ್ಮೆ ಮನದಲ್ಲಿ
ಖುಷಿಪಡಬೇಕಿದೆ ಕುಳಿತು ರಂಗಮಂಚದಲ್ಲಿ
...