...

5 views

ಬಾಳ‌ಪಯಣ ನಿಲ್ಲಿಸಲು ಸಾಧ್ಯವೇ?!

ಬಾಳ ಪಯಣ ನಿಲ್ಲಲು ಸಾಧ್ಯವೇ?! ನೀನನಗೆ ನಾನಿನಗೆ ಎಂದು ಜೊತೆಯಾಗಿ‌ಹಾಡು ಹಾಡಿ‌‌ಕೈ-ಕೈಹಿಡಿದು ನಡೆದವರು ಕೊಂಡಿ ಕಳಚಿಕೊಳ್ಳಲು ಸಾಧ್ಯವೇ?! ಕಾಲ ಬದಲಾದಂತೆ ಸಂಬಂಧಗಳು ಸವಕಳಿಯುತ್ತಿರುವುದು ನಿಜವೇ?! ಇಂದಿನ ಅನೇಕ ವಿಚ್ಛೇದನ ಪ್ರಕರಣಗಳು ಬೆಳಕಿಗೆ ಬಂದಾಗ ನಾವು ಅಂದುಕೊಂಡಂತೆ ನಿಜವಾಗುತ್ತಿವೆ ಎಂದನಿಸುತ್ತಿದೆ. ಅವರವರ ವೈಯಕ್ತಿಕ ಸಮಸ್ಯೆ ಏನೇ ಇರಲಿ? ಸೆಲೆಬ್ರಿಟಿಗಳು‌ ಆದವರು ಅಥವಾ ನಮ್ಮ ಸುತ್ತಮುತ್ತಲಿನ ಜನರು ಯಾರೇ ಆಗಿರಲಿ ಮದುವೆಯಾದ ಮೇಲೆ ಹೊಂದಾಣಿಕೆಯ ಕೊರತೆಯನ್ನು ಮುಂದಿಟ್ಟು ವಿಚ್ಛೇದನ ಪಡೆಯಲು ಮುಂದಾಗುತ್ತಿರುವುದು. ಒಂದು ಮಗು ಜನಿಸಿದ‌ ಮೇಲೂ ಬೇರೆಬೇರೆಯಾಗುವುದು, ಸಿಂಗಲ್‌ ಪೇರೆಂಟ್ ಆಗಿ ಬದುಕುವ ಸಾಹಸಲ್ಕೆ ಕೈಹಾಕುವುದು ಕಾಣುತ್ತಿದ್ದೇವೆ.

ಏಕೆ ಈ ಹೊಂದಾಣಿಕೆಯ ಕೊರತೆ ಮೂಡುತ್ತಿದೆ?! ಸ್ವಾವಲಂಬಿ ಬದುಕು, ಉದ್ಯೋಗ, ಹಣ, ಅಭಿವ್ಯಕ್ತಿ ಸ್ವಾತಂತ್ರ್ಯ, ಕರಿಯರ್ ಮುಖ್ಯ ಎನ್ನುವ ಮಾತುಗಳು ಹೆಚ್ಚಾಗುತ್ತಿವೆ. ಮೊದಲೆಲ್ಲ ಗಂಡ ಹೆಂಡತಿ ಉದ್ಯೋಗಕ್ಕೆ ಹೋಗುತ್ತಿರಲಿಲ್ಲವೇ?! ಮಕ್ಕಳನ್ನು ಸಾಕಿ ಸಲಹುತ್ತಿರಲಿಲ್ಲವೇ?! ಇಂದೇಕೆ ಈ ಪರಿಸ್ಥಿತಿ.?!

ದಂಪತಿಗಳಿಬ್ಬರೂ ಉದ್ಯೋಗಕ್ಕೆ ಹೋಗುಬ ಮನೆಯ ಪರಿಸ್ಥಿತಿ ಬದಲಾಗಿರುತ್ತದೆ. ಗೃಹಿಣಿಯರ ಜೀವನದಂತೆ ಇರುವುದಿಲ್ಲ. ಅಲ್ಲಿ ಪ್ರತಿಯೊಂದು ವಿಭಿನ್ನವಾಗಿರುತ್ತದೆ. ತಮ್ಮ ಮಕ್ಕಳನ್ನು ಸಹ ಹೊಂದಿಕೊಂಡು ಹೋಗುವ ಗುಣ ಕಲಿಸಿರುತ್ತಾರೆ.
ಮೊದಲಿಗೆ ಬರುವುದು ಸಮಯದ ಕೊರತೆ. ಒಬ್ಬರಗೊಬ್ಬರು ಸಮಯ ಕೊಡಲು ಕಷ್ಟ. ಅಲ್ಲದೇ ಮಕ್ಕಳಿಗೆ ಸಮಯ‌ಕೊಡಲು ಕಷ್ಟವಾಗುವುದು. ಪ್ರೀತಿಯ ಕೊರತೆ. ಪರಸ್ಪರ ಅರ್ಥಮಾಡಿಕೊಳ್ಳಲು ಕಷ್ಟಪಡುವುದು. ನಂಬಿಕೆಯ ಕೊರತೆ‌. ಸಿಡುಕುವುದು, ಕೋಪ ಜಗಳ ಮಾಡುವುದು.
ಎರಡನೆಯದು ಹಣಕಾಸಿನ ಸಮಸ್ಯೆ. ಇಬ್ಬರೂ ದುಡಿದರೂ ಹಣದ ಸಮಸ್ಯೆ, ಪ್ರತಿಯೊಂದು ವ್ಯವಹಾರದಲ್ಲಿಯೂ ಲೆಕ್ಕಚಾರ, ಲೆಕ್ಕ ಹಾಕಿ ಖರ್ಚು ಮಾಡಲು ನೋಡುವುದು. ಗಂಡ ಖರ್ಚು ಮಾಡಿದರೆ ಬೆಲಯಿಲ್ಲ. ಅವನು ಖರ್ಚು ಮಾಡಲಿಬಿಡು‌ ಎಂಬ ಭಾವ. ಅದೇ ಹೆಂಡತಿ ಹಣವನ್ನು ವಿನಿಯೋಗಿಸುವಾಗ ಲೆಕ್ಕಹಾಕುವುದು. ನಿಮ್ಮ ಹಣ ಇರುವಾಗ ನನ್ನ ಹಣದ ಮೇಲೆ ಏಕೆ‌ಕಣ್ಣಣು ಎಂದು ಕೇಳುವುದು. ಖರ್ಚು ಮಾಡಿದಷ್ಟು ವಾಪಾಸು ಕೇಳುವುದು.
ಆಗಲೇ ಶುರುವಾಗುವುದು.



© Writer Sindhu Bhargava