...

28 views

ಸೀತಾ ರಾಮ (ನೂರ್ ಜಹಾನ್)
ಪ್ರೀತಿಗೆ ಕಣ್ಣಿಲ್ಲ ಎಂಬುದನ್ನು ನಾನು ನಿನ್ನಿಂದ ಕಂಡುಕೊಂಡೆ.
ಪ್ರೀತಿಯ ವಾಸ್ತಲ್ಯಕ್ಕೆ ಬೆಲೆ ಇದೆ ಎಂಬುದನ್ನು ನಾನು ನಿನ್ನಿಂದ ಅರಿತುಕೊಂಡೆ.
ನಿನಗಿಂತ ನನಗೆ ಯಾರು ಹೆಚ್ಚಿಲ್ಲ ಎಂಬುದನ್ನು ಮನದಲ್ಲಿ ಬರೆದುಬಿಟ್ಟೆ.
ಇನ್ನೇನು ಹೇಳಲಿ ನನ್ನ ಜೀವವೇ ನೀನೆಂದು ನುಡಿದುಬಿಟ್ಟೆ.

ನನಗೆ ಯಾವ ಜನ್ಮದ ಪುಣ್ಯದ ಫಲವೋ ಆ ದೇವರು ನನಗೆ ನಿನ್ನಂತಹ ದೇವತೆಯನ್ನು ಜೊತೆಗೂಡಿಸಿ ಬಿಟ್ಟ.
ಹೂವಿನಂತೆ ನೀನು ನನ್ನನ್ನು ಸಲ್ಲುತ್ತಿರುವಾಗ.
ಪ್ರಪಂಚವೇ ಕೊಂಡುಕೊಳ್ಳುವಂತಹ ಆಸ್ತಿ ಮತ್ತು ಸಂಪತ್ತನ್ನು ನಿನಗಾಗಿ ನಾನು ಬಿಟ್ಟುಬಿಟ್ಟೆ.

ದುಂಬಿಯು ಜೇನನ್ನು ಸಂಗ್ರಹಿಸಿ ಕೊಂಡು ಬರುವಂತೆ ನನ್ನನ್ನು ನೀನು ಕಾಪಾಡಿಕೊಂಡು ಬರುವಾಗ.
ನಾ ನಿನ್ನ ಮಡಿಲಲ್ಲಿ ಪ್ರಪಂಚವನ್ನೇ ಮರೆತುಬಿಟ್ಟೆ.
ನನ್ನ ಮನದಲ್ಲಿ ಜೇನಿನಂತ ಸಿಹಿಯಾದ ನಿನ್ನ ಪ್ರೀತಿ ತುಂಬಿರುವಾಗ ಮತ್ತೇನು ಬೇಕು ಈ ಜಗದಲ್ಲಿ.

ಇನ್ನಾರು ಕೊಡದಂತ ಪ್ರೀತಿನಾ.
ಇನ್ನೆಲ್ಲೂ ಸಿಗದಂತಹ ವಾತ್ಸಲ್ಯನಾ.
ಇನ್ಯಾರಿಗೂ ಸರಿಸಾಟಿ ಇಲ್ಲದಂತಹ ವಾತ್ಸಲ್ಯ ಮತ್ತು ಮಮತೆಯನ್ನು ನೀನು ನನಗೆ ನೀಡಿರುವಾಗ.
ಇನ್ಯಾರಿಗೆ ಮರುಳಾಗಲಿ ಹೇಳು ನಾ.

ಹಾಡಲು ಬರಿಯಲು ಸರಿಸಾಟಿ ಇಲ್ಲದ ಆ ನಿನ್ನ ಪ್ರೀತಿಗೆ.
ಹೇಳಲು ಸಾಧ್ಯವಾಗದಂತಹ ದೇವತೆ ಅಂತ ಆ ನಿನ್ನ ಮನಸ್ಸಿಗೆ.
ಯಾರಿಗೂ ಕಾಣದಂತ ಆ ಪುಟ್ಟ ಹೃದಯಕ್ಕೆ
ನೀನು ಕಂಡಿರುವಾಗ ನಿನ್ನನ್ನು ಬಿಟ್ಟು ಮತ್ಯಾರನ್ನು ಪ್ರೀತಿಸಲು ಹೇಳು ಒಮ್ಮೆ ನೀನು.

ನಾನು ನಿನಗೆ ಜೀವ ಎಂದಾಗ
ನೀನು ನನಗೆ ಆ ಜೀವವನ್ನು ಬೆಳಗುವ ದಿವ್ಯ ಜ್ಯೋತಿ ನೀನು.
ನಿನ್ನನ್ನು ನಾನು ಎಂದು ಬಿಟ್ಟು ಬದುಕಲಾರೆ.
ನೀನಿಲ್ಲದೆ ಈ ಜೀವನವನ್ನು ನಡೆಸಲಾರೆ.
ಏಕೆಂದರೆ ಈ ಹೃದಯದಲ್ಲಿ ಬೆಳಗುವ ಜೀವದ ಜ್ಯೋತಿ ನೀನು.
ಆ ಜ್ಯೋತಿ ಇಲ್ಲದೆ ಈ ಜೀವ ಎಂದು ಬದುಕುವುದಿಲ್ಲ ಬದುಕಿದರೂ ಸಹ .
ಭಾವನೆಗಳೇ ಇಲ್ಲದ ಜೀವವಿದ್ದರೂ ಸಹ ಶವದಂತೆ ವರ್ತಿಸುವ ಈ ನನ್ನ ದೇಹ ಮಾತ್ರ..

ಎರಡು ಮುಗ್ಧ ಮನಸ್ಸುಗಳು ಒಂದು ಗೂಡಿದರೆ ಎಂತಹ ಸಂಬಂಧವು ಸರಿದೋಗುತ್ತೆ..!!

ಇಂತಿ ನಿನ್ನವ ಸೀತಾರಾಮ..,❤️© All Rights Reserved
© All Rights Reserved