...

10 views

ಡಿಯರ್ ಮೆಮೊರಿಸ್
ಸುಮ್ಮನೆ ಕೂತು ಸ್ವಲ್ಪವೇ ಬೇರೆಯವರೆಡೆಗೆ ತಿರುಗಷ್ಟೆ ನೋಡುತ್ತಿದ್ದೆ ತಿಂಗಳು ಕಳೆದರೂ ಹತ್ತಿರವಾಗುವ ಸ್ನೇಹ ಯಾರೊಟ್ಟಿಗು ಬೆಳೆಯಲೇ ಇಲ್ಲ .

ಅದೇನೋ ಯಾರ ನೋಡದ ನಾನು ನಿನ್ನೆಡೆಗೆ ನೋಡಿದೆನೋ ಅಥವಾ ನೀನೇ ನನ್ನೆಡೆಗೆ ನೋಡಿದೆಯಾ ಸರಿಯಾಗಿ ಹೇಳಲಾಗುತ್ತಿಲ್ಲ
ಒಟ್ಟಾರೆ ಹೇಳುವುದಾದರೆ ಆ ನಿನ್ನ ಮೌನ ನಿನ್ನ ನೋಟ ಈಗಲೂ ನೆನಪಿಸಿಕೊಳ್ಳುತ್ತೇನೆ .

ಸಂಜೆವರೆಗೂ ಕೂರುತ್ತಿದ್ದ ಕ್ಲಾಸ್ ಅದು ನನಗಂತೂ ನೆನಪಿಲ್ಲ ನೀನು ನನ್ನ ಪಕ್ಕ ಬಿಟ್ಟು ಬೇರೆ ಜಾಗದಲ್ಲಿ ಕೂತಿದ್ದು .

ಸ್ವಲ್ಪವೇ ಮಾತಾಡುತ್ತಿದ್ದರು ಅದರಲ್ಲೇನೋ ಖುಷಿ ಪಡುತ್ತಿದ್ದೆ ನೀನು ಅಷ್ಟೇ .

ಆಗಾಗ ಸ್ವಲ್ಪ ಜಾಸ್ತಿ ಮಾತಾಡೋವಾಗ ನಿನ್ನ ನಗು ನಿನ್ನ ಮಾತುಗಳು ನನಗೆ ಇಷ್ಟವಾಗುತ್ತಿತ್ತು ಸುಮ್ಮನೆ ಇಬ್ಬರು ನಗುತಾ ಫ್ರೀ ಟೈಮ್ ಕೂತಲ್ಲೇ ಕಳೆಯುತ್ತಿದ್ದೆವು...

ನನ್ನ ಪಕ್ಕದ ಆ ಜಾಗ ವರ್ಷ ಪೂರ್ತಿ ನಿನಗೆ reserved ಆಗಿತ್ತು ಬೇರೆಯವರು ಕೂಡ ನಮ್ಮ ಬಳಿ ಬಂದು ನನ್ನನ್ನು ನಿನ್ನ ನೋಡಿ ಏನೇನೋ ಟೀಕೆ ಮಾಡಿ ರೇಗಿಸಿದ್ದುಂಟು ನಾನೂ ನಿನಗೆ ಅದರ ಬಗ್ಗೆ ಹೇಳಲೇ ಇಲ್ಲ ಫ್ರೆಂಡ್ಸ್ ಅಲ್ವಾ ಸುಮ್ಮನೆ ಆಗುತ್ತಿದ್ದೆ .

ನೀನು ಬಾರದ ಒಂದೆರಡು ದಿನ ಮಾತ್ರ ಆ ಜಾಗ ಖಾಲಿ ಇದ್ದಾಗ ಬಹಳ ಕಾಡಿತ್ತು. ಆ ಜಾಗಕ್ಕೆ ಕೂರಲು ಬೇರೆಯವರಿಗೆ ಆಗಲೇ ಇಲ್ಲ ಕೊನೆಗೂ.

ಕೆಲವೊಂದು ನಾನೇ ತುಂಬಾ ಹೇಳುತ್ತಾ ಇದ್ದೆ ಅನಿಸುತ್ತೆ ಅದಕ್ಕೆ ನೀನು u r like my teacher guide ಅಂಥಾ wish ಕೂಡ ಮಾಡಿದ್ದು ನೆನಪಾಗುತ್ತೆ .

ಆದರೂ ಒಟ್ಟಿಗೆ ಒಂದು ಬಾರಿಯೂ ಕಾಫೀ ಅಥವಾ ಐಸ್ಕ್ರೀಮ್ ಏನನ್ನು ಜೊತೆಯಾಗಿ ತಿನ್ನಲು ಸಮಯ ಕೂಡಲೇ ಇಲ್ಲ ನೀನು ಕರಿಯಲೇ ಇಲ್ಲ ನಾನು ಕರೆಯುವ ಧೈರ್ಯ ಮಾಡಲೇ ಇಲ್ಲ ಅದೇಕೋ ನನಗೂ ಗೊತ್ತಿಲ್ಲ .

ತುಂಬಾ ನೆನಪಾಗುವ ನಿನ್ನ ಮಾತುಗಳು ನೀನು
ನಿನ್ನ ಸ್ನೇಹ ಎಂದಿಗೂ ಮರೆಯಲಾರೆ ಯಾಕೆಂದರೆ ನೀನು ಕೂಡ ನನ್ನ ಬಿಟ್ಟು ಬೇರೆಯರನ್ನು ಮಾತನಾಡಿಸಿದ್ದ ನಾನು ನೋಡೇ ಇಲ್ಲ ...

ತಡವಾಗಿ ಬರುವ ನೀನು please palce ಇಟ್ಕೊಳಿ ನಿಮ್ಮ ಪಕ್ಕ ಅಂತ msg ಹಾಕುತ್ತ ಬರುತ್ತಿದ್ದೆ .. ಆ ನಿನ್ನ ಸೀಟು reserved antha ಯಾರು ಕೂರೋ ಯೋಚನೆ ಕೂಡ ಮಾಡಲೇ ಇಲ್ಲ .

ಎಲ್ಲರಿಗೂ ನನ್ನ ನಿನ್ನ ನಡುವೆ ಸ್ನೇಹದ ಬಗ್ಗೆ ಗೊತ್ತಿತ್ತು ಹಾಗಾಗಿ ನಮ್ಮ ಮದ್ಯೆ ಒಬ್ಬರು ಬರಲೇ ಇಲ್ಲ .

ಒಂದು ಸಾರಿ ನೀನು ತುಂಬಾ late ಆಗಿ ಬಂದಾಗ ಯಾರೋ ನನ್ನ ಪಕ್ಕ ಕೂತಿದ್ದ ಅದು ನಿನ್ನ ಜಾಗದಲ್ಲಿ ಆಗಿನ್ನೂ ಅಷ್ಟು close ಆಗಿರಲಿಲ್ಲ ಆದರೂ ನೀನು ಸ್ವಲ್ಪ ಕೋಪಿಸಿಕೊಂಡು ಕೂತಿದ್ದೆ ಸ್ವಲ್ಪ ಹೊತ್ತಲ್ಲೇ ಅವನೇ ದೂರ ಹೋದ ಯಾಕಂದ್ರೆ ನಿನ್ನ reactions ನೋಡಿ ಅವನಿಗೆ ಅರ್ಥವಾಗಿತ್ತು.

ಆಮೇಲೆ ಮಾತು ಮಾತಿಗೂ ನಗುತಾ ನಾನು ಮತ್ತೆ ಅಂದಾಗ ನೀನು ಅಷ್ಟೇ... ಅನುತ್ತಿದ್ದಲ್ಲ
ಈಗಲೂ ಅದೇ ನೆನಪಾಗುತ್ತಿದೆ .

ಈಗಲೂ ನೀನು ಅಷ್ಟೇ ಸ್ನೇಹದಿಂದ ಯಾವಾಗಲಾದರು ನೆನ್ಪಿಸಿಕೊಳ್ಳ್ತಿಯಲ್ಲ ಅದೇ ಖುಷಿ ನನಗೆ .

ಈ ಸ್ನೇಹ ಹೀಗೆ ಕೊನೆವರೆಗೂ ಇರಲಿ ನನ್ನ ಜೀವನದ ಬೆಸ್ಟ್ ಮೆಮೊರಿಸ್ ಅಲ್ಲಿ u fill the most ... thank you dear freind .

© deva domaiah