...

7 views

ಸಿಂಧು🍁 ಚಿಂತನೆ
ಸಿಂಧು🍁 ಚಿಂತನೆ :

ಕಾಡುವ ಒಂಟಿತನ, ಡಿಪ್ರೆಶನ್, ಸ್ಟ್ರೆಸ್, ಆತ್ಮಹತ್ಯೆ ಪ್ರಯತ್ನ ಮತ್ತು ಸಾಯುವುದು ೩೫ ಒಳಗಿನ ವಯಸ್ಸಿನಲ್ಲಿ ಜಾಸ್ತಿ ಕೇಳಿಬರುತ್ತಿದೆ. ಕಾಲೇಜು ಜೀವನ ಓದುವ ವಯಸ್ಸಿನಲ್ಲೇ ಇಂತಹ ಸಮಸ್ಯೆಗಳು. "ನಮ್ಮನ್ನು ಅರ್ಥ ಮಾಡಿಕೊಳ್ಳಿ. ನಮ್ಮ ಭಾವನೆಗೂ ಬೆಲೆ‌ಕೊಡಿ. ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟುಬಿಡಿ...ಎಂದು ಬೊಬ್ಬೆಹಾಕುವುದು..
ಯಾವ ಸಣ್ಣ ಸಮಸ್ಯೆ ಯನ್ನು solve ಮಾಡಿಕೊಳ್ಳಲಾಗದೆ‌ಒದ್ದಾಡುವುದು ನೋಡಿದರೆ What is this? ಅಚ್ಚರಿ ಎನಿಸುತ್ತದೆ. ನಾವೆಲ್ಲ ಹೇಗೆ ಬೆಳೆದೆವು? ಹಾಗಾದರೆ ನಮಗೆ ಭಾವನೆಗಳು ಇರಲಿಲ್ವಾ?! ಒಂಟಿತನ ಕಾಡುತ್ತ ಇರಲಿಲ್ವಾ.. ನಾವೇನು ಮರದ ತುಂಡಾ? ನಾವು ಈಗ ಹೇಗಿದ್ದೇವೆ?!

ಅತೀಯಾದ "ನಾನು, ನನ್ನದು ,ನನ್ನ ಬದುಕು, ನನ್ನ ಕನಸು" ಎಂಬ ವ್ಯಾಮೋಹ" ಅವರನ್ನು ಆ ಸ್ಥಿತಿಗೆ ತಳ್ಳಿದೆ. ಸುತ್ತಮುತ್ತ ಬೇರೆ ಯಾರು ಅವರಿಗೆ ಕಾಣಿಸುವುದಿಲ್ಲ. ಇನ್ನೊಬ್ಬರಿಗಾಗಿ ಬದುಕುವುದು, ಕೆಲವೊಂದು ತ್ಯಾಗ ಮಾಡುವುದು, ಸಯ್ಯಮದಿಂದಿರುವುದು ಶಾಂತವಾಗಿ ಕುಳಿತು ಸಮಸ್ಯೆಗೆ ಪರಿಹಾರ ಹುಡುಕುವುದು ಕೈಲಿದ್ದುದಕ್ಕಾಗಿ ತೃಪ್ತಿ ಖುಷಿ ಪಡುವುದು ಇದೆಲ್ಲ ಬರುವುದೇ ಇಲ್ಲ.ಇನ್ನೇನೋ ಬೇಕು ಎಂಬ ಓಟ.. ವೃತ್ತಿ ಕ್ಷೇತ್ರದಲ್ಲಿ ಏನಾದರು ಸಮಸ್ಯೆ ಉಂಟಾದರೆ ಬಗೆಹರಿಸಿಕೊಳ್ಳುವ ಚಾಕಚಕ್ಯತೆ ಇರುವ ಅವರು ಮನೆಯೊಳಗೆ ಸೋಲುತ್ತಾರೆ. ಬೊಬ್ಬೆ ಹಾಕುತ್ತಾರೆ. ಎಲ್ಲವನ್ನೂ ಗಂಟು ಹಾಕಿಕೊಂಡು ಬಿಡಿಸಿಕೊಳ್ಳಲು ಒದ್ದಾಡುತ್ತಾರೆ. "ನಾಳೆ" ಎಂಬುದೊಂದಿದೆ ಎಂಬ ಭರವಸೆ ಬೇಡ. ಇಂದೇ ಎಲ್ಲ ಆಗಬೇಕು ಎಂಬ ಹಪಾಹಪಿ. ಇಂತವರು ಸ್ವಾತಂತ್ರ್ಯ ಹಕ್ಕು ಎಂದು ಹೋರಾಡುವುದು ಮನೆಯವರ ಜೊತೆಗೇನೆ. ವಿಚಿತ್ರ ಎನಿಸುವುದಿಲ್ಲವೇ?!

ನೀವು ಹೊರಗಿನ ಸಮಾಜಕ್ಕೆ ಯಾರು ಎಂದು prove ಮಾಡುವುದು ಬೇಡ. ನಿಮ್ಮವರಿಗಾಗಿ ಬದುಕಿ. ಅದು ಪ್ರೀತಿಯಿಂದ ಪ್ರೀತಿ ಹಂಚಿ ಬದುಕಿ. 💞 ಶುಭದಿನ 💐