...

4 views

ಮನದೊಳಗಿನ ಮಾತು
"ಮನದೊಳಗೆ ಅರಳಿದ ಭಾವನೆಗಳ ಭಾವಗೀತೆಯ ಕತೆ,ಮಧುರ ಕ್ಷಣಗಳು ಮೆಲುಕು ಹಾಕುತ್ತಾ ಜೀವನವ ನಡೆಸುತ್ತಾ ಬದುಕಬೇಕು ಎಂದು,ಸಾರಿಸಾರಿ ಮಂಡಿಯೂರಿ ಕುಳಿತು ಹೇಳುತಿದ್ದ ಗಿರಿ ತನ್ನ ಪ್ರೀತಿಯ ಪತ್ನಿಯೊಂದಿಗೆ "

ಆದರೂ ನೀರವ ಮೌನ ಪ್ರತಿಕ್ರಿಯೆ ಇಲ್ಲದೇ ನಿರ್ಜೀವವಾಗಿ ಕುಳಿತಿರುವ ಅನುವ ಕಂಡು ಏನು ತೋಚದೇ ಸುಮ್ಮನೆ ತನ್ನ ಪತ್ನಿಯ ನೋಡುತ್ತಾ ಕುಳಿತು ಇದ್ದನು

ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ ಕಾಲೇಜು ದಿನಗಳಲ್ಲಿ ಅನುವು ಎಷ್ಟು ಲವಲವಿಕೆ ಯಿಂದ ಓಡಾಡುತ್ತಿದ್ದಳು ಇಂದು ಅವಳ ಮುಖದೊಳಗೆ ಒಂದು ನಗುವ ತರುವಲ್ಲಿಯು ವಿಫಲನಾಗುತ್ತಿರುವ ಗಿರಿಗೆ ಏನು ಮಾಡಬೇಕು ಎಂದು ಅರಿಯಲಾರದೇ ನಿರ್ಜೀವವಾಗಿ ಒಳಗೊಳಗೆ ಮರುಗುತಿದ್ದನು

ಪತ್ನಿಯ ಸಂತೋಷಪಡಿಸಲು ನನಗೆ ಸಾಧ್ಯವಾಗಲಿಲ್ಲ ಎಂದು ಕೊರಗುತಿದ್ದನು..ಚಿಟಪಟ ಚಿನಕುರಳಿಯಂತೆ ಅದು ಬೇಕು ಇದು ಬೇಕು ಕೊಡಿಸು ಅಂತ ಹಠ ಮಾಡುತ್ತಿದ್ದ ಅನು ಬರೀ ಜೀವವಿದೆ ಆದರೆ ಮಾತಿಲ್ಲ,..

ಮದುವೆಯಾಗಿ೧೬ವರುಷಗಳಾದರೂ ಮಗುವಾಗದೇ ಇದ್ದ ದೇವಸ್ಥಾನದಲಿ ಪೂಜೆ,ಹೋಮ,ಹವನ ಮಾಡಿಸಿದರು ಏನು ಪ್ರಯೋಜನ ಆಗಲಿಲ್ಲ..

ಅದೊಂದು ಮುಂಜಾನೆ ಅನು ಎದ್ದು ಹೊರಬಂದಾಗ ತಲೆತಿರುಗಿ ಬಿದ್ದಳು,,ಗಿರಿ ಓಡೋಡಿ ಬಂದು ಅನು ಎದ್ದೇಳು ಏನು ಆಯಿತು ಅಂತ ಗಾಬರಿಯೊಳಗೆ ಎಬ್ಬಿಸಲು ಮಾಡಿದ ಪ್ರಯತ್ನ ವ್ಯರ್ಥ ವಾದಾಗ.. ಆಸ್ಪತ್ರೆಗೆ ಸೇರಿಸಿದಾಗ ತಿಳಿದ ವಿಷಯ ಇವರ ಬಾಳೊಳಗೆ ಕತ್ತಲ ಕೂಪವಾಗಿ ಪರಿಣಮಿಸಿದರಲಿ ಸಂಶಯವಿರಲಿಲ್ಲ..


ಗರ್ಭಕೋಶದ ಸಮಸ್ಯೆ ಇದ್ದುದರಿಂದ ಈ ತರಹ ಅನುವಿಗೆ ತಲೆತಿರುಗುವಿಕೆ, ಸುಸ್ತು ಸಾಮಾನ್ಯ ವಾಗಿ ಕಂಡುಬರುತ್ತದೆ ಎಂದು ಡಾಕ್ಟರ್ ಹೇಳಿದಾಗ ಗಿರಿಗೆ ನಿಂತ ನೆಲವೇ ಬಾಯಿಬಿಟ್ಟು ಗಹಗಹಿಸಿ ನಕ್ಕ ಅನುಭವವಾಯಿತು..

ಚಿನಕುರಳಿಯಂತೆ ಜಿಗಿಯುತಿದ್ದ ಅನುವಿಗೆ ಇದೆಂಥಹ ಶಿಕ್ಷೆ, ಮಕ್ಕಳೆಂದರೆ ಪ್ರಾಣ ಬಿಡುವ ಅನುವಿಗೆ ಏನು ಮಾಡುವುದು ಎಂದು ತೋಚದೆ ನಿಂತಿದ್ದ ಗಿರಿ ವಾಸ್ತವ ಕೆ ಬಂದಾಗ ಡಾಕ್ಟರ್ ನೀವು ಗರ್ಭಕೋಶದ ಆಪರೇಷನ್ ಮಾಡಿದರೆ ಮಾತ್ರ ಇವರಿಗೆ ಜೀವಕೆ ಅಪಾಯವಿಲ್ಲ ಎಂದು ಹೇಳುತ್ತಿದ್ದರು... ತಕ್ಷಣವೇ ಅಪರೇಷನ್ ತಯಾರಿ ಮಾಡಬೇಕು ಎಂದಾಗ ನನ್ನ ಚಿನಕುರಳಿ ಅನುವೆ ನನಗೆ ಮುಖ್ಯ, ಪ್ರಾಣಕ್ಕೆ ಮಿಗಿಲು ನನ್ನ ಹೆಂಡತಿ ಎಂದು ಪ್ರೀತಿಸುತ್ತಿದ್ದ ಗಿರಿ ಸಮ್ಮತಿಯ ಸೂಚಿಸಿದನು.. ಆದರೆ ಅನುವಿಗೆ ಈ ವಿಷಯ ತಿಳಿಸಬಾರದು, ನಾನು ನಿಧಾನವಾಗಿ ತಿಳಿ ಹೇಳುವೆ ಡಾಕ್ಟರ್ ಎಂದು ಕಣ್ಣೀರೊರೆಸಿಕೊಂಡು ಹೇಳುತಿದ್ದಾಗ ಆಗುವುದೆಲ್ಲಾ ಒಳ್ಳೆಯ ದಕೆ ಗಿರಿ ಎಂದು ಅವನಿಗೆ ಸಂತೈಸಿದರು..


ಅಪರೇಷನ್ ಗೆ ಎಲ್ಲ ಸಿದ್ಧತೆಗಳನ್ನು ನಡೆಸಿ ಎಂದು ನರ್ಸ್ ಗೆ ಹೇಳುತ್ತಿದ್ದರು.. ಅನುವಿನ ಜೊತೆ ನಿಂತು ಧೈರ್ಯ ಹೇಳಿ ಏನಿಲ್ಲ ಅನು ಸಣ್ಣ ಆಪರೇಶನ್ ಎಂದು ಹೇಳಿ ಅವಳ‌ ಮುಖವ ತನ್ನತ್ತ ಮಗುವಿನಂತೆ ನೋಡಿದನು..ಕೆಲಘಂಟೆಗಳ ನಂತರ ಗರ್ಭಕೋಶವನ್ನು ತೆಗೆದು ಹಾಕಲಾಗಿ, ಅಪರೇಷನ್ ಮುಗಿದಿತ್ತು..


ಡಾಕ್ಟರ್ ಹೆಗಲ ಮೇಲೆ ಕೈ ಹಾಕಿ ಅಪರೇಷನ್ ಮುಗಿದಿದೆ ಇನ್ನು ಅರ್ಧ ಗಂಟೆಯಲ್ಲಿ ಹೋಗಿ ನೋಡಿ ಎಂದು ಹೇಳಿದರು...ಅರ್ಧ ಗಂಟೆ
ಒಂದು ಯುಗದಂತೆ ಅನಿಸಿತು ಗಿರಿಗೆ..ಪ್ರತಿ ಒಂದು ನಿಮಿಷಕ್ಕೆ ಕೂಡ ವಾಚ್ ಗಮನಿಸುತ್ತಾ ಕುಳಿತು,ನಿಂತು ಚಡಪಡಿಸುತ್ತಿದ್ದನು..

ಅರ್ಧ ಗಂಟೆ ಕಳೆದು ಅನುವಿಗೆ ಪ್ರಜ್ಞೆ ಬಂದಾಗ ತಲೆನೇವರಿಸಿ ನನ್ನ ಮುದ್ದು ಗೊಂಬೆಯೇ ನೀನೆ ನನಗೆಲ್ಲ ನಿನಗೆ ನೋವಾದ್ರೆ ನಾನು ದುಪ್ಪಟ್ಟು ಅನುಭವಿಸುವೆನು ಬಂಗಾರಿ ಎನ್ನುತ್ತಾ ಅವಳ ಕೈಯ ಹಿಡಿದು ಹೇಳುತ್ತಿದ್ದನು..ಅನು ಗಿರಿ ಏನು ಆಯಿತು ನನಗೇನೂ ಆಗೋದಿಲ್ಲ ನೀವ್ಯಾಕೆ ಚಿಂತೆ ಮಾಡುವಿರಿ ಎನ್ನುತ್ತಾ ನಕ್ಕಳು..ಸ್ವರ್ಗವೇ ಸಿಕ್ಕಷ್ಟು ಖುಷಿ ಆಯಿತು ಗಿರಿಗೆ..

ದಿನ ಕಳೆಯಿತು ಒಂದು ವಾರದ ನಂತರ ಡಿಶ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಹೋಗಲು ಎಲ್ಲ ತಯಾರಿ ಮಾಡಬೇಕು ಆಗ ಡಾಕ್ಟರ್ ಗಿರಿ ಹತ್ತಿರ ಬೇಗ ವಿಷಯ ತಿಳಿಸಿದರೆ ಉತ್ತಮ ಮತ್ತೆ ನೋವು ದುಪ್ಪಟ್ಟು ಅನುಭವಿಸುವುದಕ್ಕೆ ಅಂತ ಹೇಳಿದರು... ನಾನು ಹೇಳುವೆ ಸರಿಯಾದ ಸಮಯಕ್ಕೆ ಕಾಯುವೆನು ಎಂದು ಹೇಳಿ ಪ್ರಿಸ್ಕ್ರಿಪ್ಷನ್ ತೆಗೆದುಕೊಂಡು ಕೌಂಟರ್ ಬಿಲ್ ಕಟ್ಟಿ ಮನೆಗೆ ಬಂದನು..

ಮನೆಗೆ ಬಂದ ಅನುವಿನ ಜೊತೆ ಏನು ನಡೆದೇ ಇಲ್ಲ ಎಂಬಂತೆ ನಾಟಕ ಮಾಡುತ್ತಾ ಇದ್ದ ಗಿರಿಯ ಕಂಡು ಅನುವು,ಗಿರಿ ಇಲ್ಲಿ ಬನ್ನಿ ನೀವು ಮೊದಲಿನಂತೆ ಇರಿ, ಡಾಕ್ಟರ್ ನಿಮ್ಮ ಜೊತೆ ಮಾತಾಡ್ತಾ ಇರೋದು ನಾನು ಕೇಳಿರುವೆನು.. ನನಗಿನ್ನೂ ಮಕ್ಕಳು ಆಗೋಲ್ಲ ಅನ್ನೋ ಸತ್ಯ ತಿಳಿದಿದೆ ಗಿರಿ ನೀವು ನಾಟಕ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದಾಗ ಅಅಅಅಅ.......ಅನು.....ಅನು ಎಂದು ಧರಧರನೆ ಒಂದೇ ಸಮನೆ ಕಣ್ಣೀರು ಹೊರಬರುತ್ತಿತ್ತು,,ಅನುವು "ನನಗೆ ನೀನು,ನಿನಗೆ ನಾನು"ಎಂದು ಅವನ ಹಣೆಗೆ ಮುತ್ತಿಟ್ಟು... ಇಂತಹ ಗಂಡನ ಪಡೆದುದಕೆ ನನಗೆ ಜೀವನದಲ್ಲಿ ಬೇರೇನೂ ಬೇಡ ಎಂದು ಮನಸಿಗೆ ಸಮಾಧಾನ ತಂದಿದ್ದಳು....

ಇದಾಗಿ ಇಂದು ೨೦ವರುಷಗಳೇ ಕಳೆದವು, ಬರಬರುತ್ತಾ ಅನು ಮೌನವಾಗಿಯೇ ಉಳಿದುಬಿಟ್ಟಳು...ಗಿರಿ ಪ್ರತಿ ಕ್ಷಣ ಕ್ಷಣಕ್ಕೂ ಅವಳ ಸಂತೋಷವನ್ನು ಕಾಣಲು ಹಪಹಪಿಸುವ ಮೀನಿನಂತೆ ವಿಲವಿಲ ಒದ್ದಾಡಿ ನಲುಗುತಿದ್ದನೂ..

ಎಷ್ಟು ದಿನ, ಯುಗಗಳಲ್ಲಿ ಯೂ ಕಾಯುವೆ ಎಂದು ಅನುವಿನ ಒಂದು ನಗುವಿಗೆ ಎಂದು ಕಾಯುತ್ತಾ ಕುಳಿತಿದ್ದನು..

ಪ್ರೀತಿಯು ಎಷ್ಟು ಭಾವನೆಗಳ ಗೂಡು ಅಲ್ಲವೇ..
ಹೃದಯದ ಪಿಸುಮಾತು ಒಂದು ದಿನ ಅರಿವಾಗಿ ಮೊದಲಿನಂತೆ ಇರಲಿ ಜೀವನ ಎಂದು ನಾವು ಬಯಸೋಣ..

ಕಥೆ ಇಷ್ಟ ಆದರೆ ತಿಳಿಸಿ..


ರಾಧಿಕಾ ಗಿರೀಶ್ ಮಯ್ಯ
ಬಿ ಸಿ ರೋಡ್