...

7 views

samaya


ಜೀವ ಮತ್ತು ಜೀವನವನ್ನು ರೂಪಿಸುವ ಒಂದು ಅಮೂಲ್ಯ ಸಾಧನ. ಸಮಯವನ್ನು ಸರಿಯಾಗಿ ಬಳಸಿಕೊಂಡರೆ ಸಫಲ ಇಲ್ಲಾದರೆ ವಿಫಲ. ಸಮಯದ ಹಿಂದೆಯೇ ನಾವು ಹೋದರೆ ಒಳ್ಳೆಯದು ಬದಲಾಗಿ ಈ ಸಮಯ ನಮ್ಮ ಹಿಂದೆ ಬರುತ್ತದೆ ಎಂದರೆ ಅದು ದಡ್ಡತನ ಅಲ್ಲದೆ ಇನ್ನೇನು? ಸಮಯ ಯಶಸ್ಸು, ಕೀರ್ತಿಯನ್ನು ತಂದುಕೊಡುತ್ತದೆ ಸರಿಯಾದ ಮಾರ್ಗದಲ್ಲಿ ಹೋದರೆ ಮಾತ್ರ.ಸಮಯವನ್ನು ಬಾಳಿನಲ್ಲಿ ದುರುಪಯೋಗ ಮಾಡಿದರೆ ಅದನ್ನು ಮುಂದೆ ಉಪಯೋಗ ಪ್ರಯೋಗಮಾಡಲು ವಯಸ್ಸು ಅಥವಾ ಆಯಸ್ಸು ಇರುವುದೇ?
ಅದಕ್ಕೆ ಈ ಸಮಯವನ್ನು ಹಿಂದೆ ಸರಿಯಾಗಿ ಉಪಯೋಗಿಸಿ ಕೀರ್ತಿಶಾಲಿ ಗಳಾಗಿ.

ನನಗೂ ಕೂಡ ಸಮಯದ ಮೌಲ್ಯ ತಿಳಿದಿರಲಿಲ್ಲ. ಯಾರಿ ಸಮಯದ ಮೌಲ್ಯದ ಕುರಿತು ಪರಿಪಾಠ ಮಾಡಿದರು ಅದು ಕೇಳಿದ ಹಾಗೆ ನಾಟಕ ಮಾಡುತ್ತಿದ್ದೆ. ಸಮಯವನ್ನು ಸರಿಯಾಗಿ ಉಪಯೋಗಿಸಿರಲಿಲ್ಲ . ಓದುವ ಸಮಯದಲ್ಲಿ ಟಿವಿ ಕಂಪ್ಯೂಟರ್ ಮತ್ತು ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಿದೆ. ಆದರೆ ಊಟ-ಉಪಚಾರ ಸಮಯ ಸರಿಯಾಗಿ ಪಾಲಿಸುತ್ತಿದ್ದೆ. ಆಟವನ್ನು ಸರಿಯಾಗಿ ಆಡುತ್ತಿದ್ದೆ. ಹೀಗೆ ಓದುವ ಸಮಯದಲ್ಲಿ ಕಿತಾಪತಿ ಮಾಡಿದ ಕಾರಣ ನನ್ನ ಎಸೆಸೆಲ್ಸಿ ಅಂಕ ಉತ್ತಮವಾಗಿ ಬರಲಿಲ್ಲ. ಇದರಿಂದ ಮನಸ್ಸಿಗೆ ತುಂಬಾ ಬೇಸರವಾಯಿತು.ತಂದೆ ತಾಯಿಯ ಆಸೆಯನ್ನು ಎಂದು ನಿರಾಸೆ ಮಾಡಬಾರದೆಂದು ಮನದಲ್ಲಿ ಅರಿತ ನಾನು ಮುಂದೆ ಆಯಾ ಸಮಯವನ್ನು ಸರಿಯಾಗಿ ಪಾಲನೆ ಮಾಡಲು ಶುರುಮಾಡಿದೆ. ಓದುವ ಕಡೆ ಹೆಚ್ಚಿನ ಒತ್ತನ್ನು ಕೊಟ್ಟೆ ಮನೋರಂಜನೆಯನ್ನು ಆದಷ್ಟು ಕಡಿಮೆ ಮಾಡಿದೆ. ನನ್ನ ಈ ನಿರ್ಧಾರದಿಂದ ಮುಂದೆ ಪಿಯುಸಿಯಲ್ಲಿ ಉತ್ತಮ ಅಂಕ ತೆಗೆಯಲು ಸಹಕಾರಿಯಾಯಿತು. ನನ್ನ ಸಮಯಪ್ರಜ್ಞೆಯಿಂದ ಇಂದು ನನಗೆ ಒಳ್ಳೆಯ ಭವಿಷ್ಯ ರೂಪಿಸಲು ಸಾಧ್ಯವಾಯಿತು. ನನ್ನ ಜೀವನದುದ್ದಕ್ಕೂ ಸಮಯ ಒಂದು ಅಮೂಲ್ಯವಾದ ಖಜಾನೆ ಯಾಗಿದೆ. ಈಗ ಜಾನಿಯನ್ನು ಸರಿಯಾಗಿ ಬಳಸಬೇಕು. ನಾವೆಲ್ಲರೂ ಸಮಯಪಾಲನೆ ಸರಿಯಾಗಿ ಮಾಡೋಣ. ಒಳ್ಳೆ ಭವಿಷ್ಯವನ್ನು ರೂಪಿಸೋಣ