![...](https://api.writco.in/assets/images/post/user/quote/442221217094431710.webp)
9 Reads
ಪ್ರೀತಿಯೆಂಬ ಪರದೆಯ ಮೆಲ್ನಡೆದ ನಾಟಕ,
ನೂರಾರು ದಿನಗಳ ಪ್ರದರ್ಶನ.
ಎಂದೆಂದಿಗೂ ಅಚ್ಚಳಿಯದೆ ಉಳಿದ ಸಂಭಾಷಣೆ,
"ಏಳೇಳು ಜನುಮಗಳ ಸಮ್ಮಿಲನ".
ಪರದೆಯ ಮೇಲೆ ನಿತ್ಯವೂ
ರಂಗು ರಂಗಿನ ಬೆಳಕಿನಾಟ.
ಒಮ್ಮೊಮ್ಮೆ ಕೆಂಪು, ಒಮ್ಮೊಮ್ಮೆ
ಬಿಳುಪು,ಅಲ್ಲಲ್ಲಿ ಹಸಿರು.
ನಿತ್ಯವೂ ಅದದೇ ಪುನರಾವರ್ತನ.
ಕಡೆಗೋಮ್ಮೆ ಪರದೆ ಕಳಚಿತು,
ಪಾತ್ರಧಾರೀಗಳೂ ಹಿಂಜರಿದರು.
ಕುಳಿತಿದ್ದ ಪ್ರೇಕ್ಷಕನೆದ್ದು ನುಡಿದನು,
ಇದುವೇ ಚರ್ವಿತ ಚರ್ವಾಣ!.