15 Reads
#ಸುಮನ್ #ಭಾವಗಳು #ಪ್ರೀತಿ #WritcoQuote #writco
ಭಾವನೆಗಳ ಮಧುರ ಮಿಲನ
ಪ್ರೀತಿ ಅದರ ಸಿಹಿ ಚುಂಬನ
ಮಧುರಾತಿ ಮಧುರ ಮೈತ್ರಿಯ
ಒಲವ ಧಾರೆಯ ಹೂರಣ..!!
ನೀ ಸನಿಹವಿರದ ಒಂಟಿತನ
ತುಸು ನಕ್ಕು ಮರೆಯಾದ ಗೆಳೆತನ
ಪ್ರೇಮಪುಟವಾದ ಸಂಕಲನ
ಬಾಳ ಕಳೆಯುವಾಸೆ ವ್ಯವಕಲನ..!!
ಪ್ರೀತಿ ಮೊತ್ತ ಕೂಡಿ ಹಾಕಿದೆ...
ಕಣ್ಣಗಳಲಿ ಸಿಹಿ ಮುದ್ರೆ ಸಹಿ ಹಾಕುತ್ತ..
ಮತ್ತೇಕೋ ಶುರುವಾಯಿತು ಪ್ರೇಮಪಾಠ,
ಹೃದಯದೊಳಗೆ ನೆನೆದು ನೆನೆದು ನಾ
ಭಾವುಕಳಾದೆ,
ಮಾಯವಾದ ಮಿಲನದಿ ನಿನ್ನೊಳು
ಬೆರತಂತೆ ಮಗ್ನಳಾದೆ..!!
ಕೂಡಿ ಬಾಳಿದರೆ ಸ್ವರ್ಗ ಸುಖ
ಕಾವ್ಯವಾಗಿ ಬರುವೆಯಾ
ನಿನ್ನೆಸರನ್ನೇ
ಬರೆಯುವೆ ಪ್ರತಿ ಪದಗಳಲ್ಲಿ
ಓ... ಪ್ರಾಣಸಖ..!!
❤️ಸುಮನ್ ಹೆಚ್ ಸಿ ❤️