...

2 Reads

........ ಓ ಕೋಗಿಲೆ....‌‌‌.
ಮಾಮರವು ಕೈಬೀಸಿ ನಿನ್ನ ಕೂಗಿದೆ
ಹಸಿರೆಲೆಗಳು ಬಾಡುತಿವೆ.ನಿನ್ನ ಕಾಣದೆ
ಎಲ್ಲಿ ಅಡಗಿ ಕುಳಿತೆ ನೀನು ಓ ಕೋಗಿಲೆ
ಹರಿಸದೆಯೆ ಜಗಕೆ ಮಾಧುರ್ಯದ ಸೆಲೆ

ಏತಕಾಗಿ ಮೌನವೃತವ ಆಚರಿಸಿರುವೆ
ಕಾಯುತಿದೆ ನಿನ್ನ ದನಿಗೆ ದಿಗ್ದಿಗಂತವೇ
ಚೂತವನದ ತುಂಬೆಲ್ಲಾ ಗಾಢ ಮೌನವೇ
ಇದಕೆ ಅಂತ್ಯ ನೀನೇ ಹಾಡು ಪರಪುಟ್ಟವೇ

ಪದವಿಯ ಪ್ರಚಾರದ ಗೊಡವೆಯಿಲ್ಲ ನಿನಗೆ
ಹರಿಸುತಿರುವೆ.ಪಂಚಮದಿಂಚರವನು ಇಳೆಗೆ
ಅಳೆಯಬಹುದೇ ಹೊರರೂಪದಿ ಅಂತಃಸತ್ವವ
ಮರೆಯಲಹುದೆ ಜಗವು ನಿನ್ನ ಮಧುರಗಾನವ..