...

2 views

"ಪ್ರೇಮ ಪತ್ರ...
#"ಪ್ರೇಮಿಯು ನೀ ಎಲ್ಲಿರುವೆ
ನನ್ನ ಮರೆತು ಹೇಗಿರುವೆ

ನಿನಗಾಗಿ ಕಾದಿರುವೆ
ಕಾಯುತ ಹೃದಯವು

ಬಳಲಿಹುದು ಬಾರಾ
ಹೃದಯ ಕದ್ದ ಚೋರ

ಕ್ಷೇಮದಿ ನೀನು ಇರುವೆಯಾ
ನನಗಾಗಿ ಹಂಬಲವು

ನಿನಗಿಲ್ಲದಿಹೆ ಮನಸ್ಸು
ಕಲ್ಲಾಗಿಹೆಯೇನು

ನನ್ನ ನೀ ಮರೆತೆಯೇನು
ಒಲವಿನ ಕರೆಯನು

ತಾರೆಯಾ ಬರುವೆನು
ನಿನ್ನಲ್ಲಿ ಓಡೋಡಿ

ಸೇರುವೆನು ನಿನ್ನಲ್ಲಿಗೆ
ಬದುಕಿನ ಜೊತೆಯಾಗಿ

ಸಾಗೋಣವೇ ಸುಖದಲಿ
ಬಾಳಲಿ ಪ್ರೇಮದಲಿ

ಒಂದಾಗಿ ಕೊನೆವರೆಗು
ಬಾಳೋಣ ಪ್ರೀತಿಯಲಿ

ಬಾರೆಯಾ ನೀನಗಾಗಿ
ಬರೆಯುತಿಹೆ ಈ ಓಲೆಯಾ...,✍
💘shobha💐