...

21 views

ತುಟಿಯ ರಂಗು..
ಹೆಣ್ಣು ಮಕ್ಕಳಿಗೆ ತುಟಿಗೆ ರಂಗು ಇರಲೇ ಬೇಕು.. ಲಿಪ್ಸ್ಟಿಕ್ ಇಲ್ಲದೇ ಅರೆಘಳಿಗೆ ಇರಲಾರರು ಎಂಬ ಆರೋಪ ಹೆಣ್ಣು ಮಕ್ಕಳ ಮೇಲೆ😁 ಹೊರಗಡೆ ಹೋಗಲು,ಆಫೀಸ್, ಕಾಲೇಜು ಪಂಕ್ಷನ್ ಗಳಲ್ಲಿ ಬ್ರಾಂಡೆಡ್ ಲಿಪ್ಸ್ಟಿಕ್ ಅನಿವಾರ್ಯ..ಇಂದಿನ ಮಂದಿಗೆ..😁 ಆದರೆ ಮನೆಯಲ್ಲಿ ಇರುವಾಗಲೂ ಬಳಸಿದರೆ ಆರೋಗ್ಯಕ್ಕೆ ಹಾನಿಕಾರಕ.. ಯಾವಾಗಲೂ ಕೆಮಿಕಲ್ ಉಪಯೋಗಿಸಿ ಮಾಡಿದ ಕಂಪೆನಿಯ ಸಾಮಗ್ರಿಗಳನ್ನು ಬಳಸಿದರೆ ತ್ವಚೆಗೆ ಹಾನಿ..
ಹಾಗಿದ್ದರೆ ಹೀಗೆ ಮಾಡಿ..
ಪುಟ್ಟ ಪುಟ್ಟ ಒಂದೆರಡು ಕೆಂಪು ಗುಲಾಬಿ ಹೂವು ತೆಗೆದುಕೊಂಡು, ಅದರ ದಳಗಳನ್ನು ತೆರಿಯಿರಿ. ಸ್ವಲ್ಪ ಕಲ್ಲಿನಿಂದ ಜಜ್ಜಿ.. ನಂತರ ಒಂದು ಪಾತ್ರೆಗೆ,ಜಜ್ಜಿದ ಹೂವಿನ ದಳ ಮತ್ತೆ, ಒಂದು ಚಮಚ ಅಲವೇರಾ ಜೆಲ್(ತಾಜಾ ಅಲವೇರಾ ಇದ್ದರೆ ಅದರ ರಸ)ಒಂದು ಮೂರು ನಾಲ್ಕು ಚಮಚ ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿ,ಮೂರು ದಿನಗಳು ನೆನೆಯಲು ಪ್ರಿಜ್ ಒಳಗೆ ಇಡಿ...ಮೂರು ದಿನಗಳ ನಂತರ,ದಳಗಳು ರಸ ಬಿಟ್ಟು ಲೈಟ್ ಪಿಂಕ್ ಆಗ್ತವೆ..ಮನೆಯಲ್ಲಿ ಇರುವಾಗ,ತುಟಿಗೆ ಹಚ್ಚುತ್ತಾ ಬಂದರೆ..ತುಟಿ ಕೂಡ ದಿನ ಕಳೆದಂತೆ ,ಮೃದುವಾಗಿ,ಗುಲಾಬಿ ಬಣ್ಣಕ್ಕೆ ತಿರುಗುತ್ತದೆ.‌
(ವಿಸೂ....ಕೆಂಗುಲಾಬಿ ದೊಡ್ಡ ದೊಡ್ಡ ಹೂವು ಬರದು ಇದಕ್ಕೆ....ಚಿತ್ರದಲ್ಲಿ ತೋರಿಸಿದ ಪುಟಾಣಿ ಹೂವೇ ಆಗಬೇಕು)
© All Rights Reserved