ಶೀರ್ಷಿಕೆ ; ನನ್ನವ್ವನ ಸೀರೆ
ಮಾಸಿತ್ತು ನನ್ನವ್ವನ ಸೀರೆ
ಸವೆದು... ಮಾಸಿತ್ತು.. ನನ್ನವ್ವನ ಸೀರೆ..
ಮದುವೆ ಮುಂಜಿ ಸಿನಿಮವೆಂದು
ಸುತ್ತಲು ಉಟ್ಟಿ ಮಾಸಿರಲಿಲ್ಲ
ಆದರೂ.. ಸವೆದು... ಮಾಸಿತ್ತು!
ನನ್ನ ನಿದ್ರೆಗೆ ಜೋಕಾಲಿ ಕಟ್ಟಿ
ಜಗ್ಗಿ... ಜಗ್ಗಿ...ಸವೆದಿತ್ತು
ನಾ ಆಟವಾಡಿ ಬಂದಾಗ..
ನನ್ನ ಬೆವರ ಒರಿಸಿ ಕೊಳಕಾಗಿ ಮಾಸಿತ್ತು
ನನ್ನಳುವಿನ ಕಣ್ಣೀರು, ಸಿಂಬಳ...