...

7 views

ತಾಯಿ-ತವರು
ತವರು ತಂಪು, ತಣ್ಗಂಪು, ತಣ್ಬನಿ,
ತಾಯಿ ತಂಬುಳಿ, ತಂಗಾಳಿ, ತಣ್ಗೊಳ.

ತಳಿರ ತಲ್ಪವು ತಾಯ ತೊಡೆಯು,
ತರುಣಾತಪವು ತಾಯ ತೆಕ್ಕೆಯು.
ತಾಯಿಲ್ಲದರೆಲ್ಲಿ ತವರು?
ತೋಂಟಿಗನಿಲ್ಲದೆಲ್ಲಿ ತೋಟವು?

ತಂತಿ ತಂಬೂರಿ, ತೊಗಲು ತಮಟೆ,
ತಳಿರು ತೋರಣ, ತುಹಿನ ತಂಪು,
ತಟಾಕ ತಾವರೆ, ತುಡುಪು ತೆಪ್ಪ,
ತಾಯಿ ತವರು, ತಾಯಿ ತವರು.

ತಂಗಳಿರಲಿ, ತುಪ್ಪವಿರಲಿ,
ತಿಮಿರವಿರಲಿ, ತಿಂಗಳಿರಲಿ,
ತಾಪವಿರಲಿ, ತಲ್ಪವಿರಲಿ,
ತುಡಿವ ತವರಿರಲಿ ತರಳೆಗೆ.

© ಕೃಷ್ಣಕವಿ
#ಕೃಷ್ಣಕವಿ #ಏಕಾಕ್ಷರ_ಕವನ #ತಾಯಿ #ತವರು