...

6 views

ಮೌನವೇಕೆ?

©
ಕವಿತೆ:ಮೌನವೇಕೆ?
ರಚನೆ;ಭೃಂಗಿಮಠ ಮಲ್ಲಿಕಾರ್ಜುನ.

ಮೌನವೇಕೆ
ಹೇಳು
ನಿನ್ನ ಹೃದಯದಾಳದ
ನೋವಲ್ಲೂ
ಪ್ರೀತಿಯ ಝರಿ ಉಕ್ಕಿದೆ
ಬಿಕ್ಕಿ ಬಿಕ್ಕಿ ಅತ್ತರೂ
ಸತ್ತರೂ ಕೇಳುವವರಿಲ್ಲ
ಎತ್ತಲೂ ಸುತ್ತಲೂ
ಕಷ್ಟ ಕಾರ್ಪಣ್ಯಗಳ ರಾಶಿಯೇ ಸೃಷ್ಠಿಯಾಗಿದೆ
ಗಟ್ಟಿದೈರ್ತದಿ ಮೆಟ್ಟಿ ನಿಲ್ಲುವ ಧಿಟ್ಟತನ ಬೇಕಾಗಿದೆ
ಕೊಟ್ಟಿ ಜನರ
ನಡುವೆ ಸಿಕ್ಕು ಒದ್ದಾಡುವ ಬದಕು ಸ್ಢಷ್ಠಿಯ ನಿಯಮದಿ ಬದುಕಿ ಮುನ್ನುಗ್ಗಬೇಕಿದೆ
ಎದ್ದೇಳು ಬಿಚ್ಚು ಹೃದಯ ರಾಗವ
ಹಾಡಲು ಪ್ರೇಮ ಗೀತೆಗೆ ಶೃತಿಯಾಗಿ
ರತಿಯಾಗಿ ಜೊತೆಯಾಗಿ
ಬಾಳ ನೌಕೆಯು ಮುಳುಗದಂತೆ
ಸಾಗಿಸುತ್ತಲೇ ಬದುಕ ಪಯಣದ
ಯಶಸ್ವಿ ಗುಟ್ಟು ಅರಿತು
ಮನದಾಳದಲಿ ಬೆರೆತು
ಛಲಗಾರಿಕೆಯಲಿ ಎದೆಗಾರಿಕೆಯಲಿ ಛಲ
ಮೂಡಿಸಿ ಸಾಧನೆಯ ಶಿಖರ ಏರಿಸಿ
ಬಾ ಎದ್ದೇಳು ನಡೆ ಮುಂದೆ ಬದುಕಿನೊಡನೆ ನಾಡ ನುಡಿಯ ಕಟ್ಟಲು
ಸಮಾಜದ ಅಭಿವೃದ್ದಿಯ ಮೆಟ್ಟಿಲು ಘಟ್ಟಿಯಾಗಿಸಿ
ಜೀವನ ಪಯಣಕೆ
ಹೃದಯದಾಳದ ಬಯಕೆ ನೀಗಿಸಿ ಯಶಸ್ಸು ಕಾಣಲು
© Mallikarjun Bhrungimath