...

8 views

ಪ್ರಾರ್ಥನೆ
(ಪ್ರಾರ್ಥ ನೆ)
ಮರಣಮೃದುಂಗ ನಿಲ್ಲಿಸು ದೇವ
(ಕವಿತೆಯ ರಚನೆ : ಭ್ರಂಗಿಮಠ ಮಲ್ಲಿಕಾರ್ಜುನ ವಕೀಲರು.)

ಎಲ್ಲೆಡೆಯೂ ಸುಳಿವಿಲ್ಲದೇ
ವೈರಾಣು ಹಾವಳಿಗೆ ತತ್ತರಿಸಿ
ಆವರಿಸಿರುವ ಕತ್ತಲ ಛಾಯೆಯ ತಡೆಯಲು ಮರಣ ಮೃದುಂಗ ನಿಲ್ಲಿಸು ದೇವಾ...

ಪ್ರತಿಕ್ಷಣವೂ ಪರಿವರ್ತನೆಯಾಗುತ್ತಿರುವ ಕರಾಳ ಘಳಿಗೆಯ ಬದಲಿಸಿ
ಮಾನವ ಜನರ ರಕ್ಷಿಸಿ
ಒಳ್ಳೆಯ ಕಾಲ ತರಲು
ಮರಣಮೃದುಂಗ ನಿಲ್ಲಿಸುದೇವಾ..

ಬಲ್ಲಿದರು ಬಲ್ಲವರು ಒಳ್ಳೆಯವರು ಕೆಟ್ಟವರೆನ್ನದೇ
ಎಲ್ಲರನ್ನೂ ದುರಂತಕೆ ಸಿಲಿಕಿಸಿ
ನೋವಿನ್ಹೆಜ್ಜೆಗಳನ್ನೂರಿದ ಕೊರೋನಾದ ಪರಿಣಾಮವ ತಡೆದು ಮರಣಮೃದುಂಗ ನಿಲ್ಲಿಸುದೇವಾ...

ಚಿತಾಗರವೂ ತುಂಬಿ ತುಳಕಿ
ಹೃದಯಗಾರಿಕೆ ಅಡಲೊಡೆದು
ಆಕ್ಸಿಜನ್ ಕೊರತೆಗೂ ನಡುಗಿ
ಹೃದಯ ಒಡೆದು ಹೋಗುವ ಈ ಕ್ಷಣಗಳ ಮರಣ ಮೃದುಂಗ ನಿಲ್ಲಿಸು ದೇವಾ...

ನರಳಾಟ ಗೋಳಾಟ
ಹೆಣಗಳ ರಾಶಿಗ ಎದುರು ಕಣ್ಣೀರು ಹರಿಯುವಾಗ
ಅಸಾಯಕತೆಯೇ ಮೇಲಾಗಿ
ಪ್ರಾಣ ಪಕ್ಷಿ ಹಾರತಿಹವಿಲ್ಲಿ ನಿನ್ನ ಶಕ್ತಿಯ ನೀಡಿ ಮರಣ ಮೃದುಂಗ ನಿಲ್ಲಿಸು ದೇವಾ..

ಪ್ರತಿ ಮುಖಕ್ಕೂ ಕವಚ
ಪ್ರತಿ ರೋಗಿಯ ಗಂಟಲಿಗೆ ಚಮಚ
ಯಾರೂ ಯಾರಿಗೂ ಭೇಟಿಯಾಗದ ನಿರ್ಭಂಧನೆಯ ಮಧ್ಯ ಅಳುತ್ತಲೇ ಸಾಯುವವರ ರಕ್ಷಿಸಲು ಮರಣಮೃದುಂಗ ನಿಲ್ಲಿಸು ದೇವಾ...

ಹಣಪಿಶಾಚಿಗಳಿಲ್ಲಿ
ಮಾರತ್ತಿದ್ದಾರೆ ಚುಚ್ಚು ಮದ್ದು ಔಷಧಿ ಕಾಳ ಸಂತೆಯಲ್ಲಿ
ಬಡವ ಮದ್ಯಮರಿಗೆ ಸಿಗದಂತಾಗಿ
ಪ್ರಾಣ ಬಿಡುವವರು ಜೀವಂತ ಉಳುಸಲು
ಮರಣ ಮೃದುಂಗ ನಿಲ್ಲಿಸುದೇವಾ...

ಬರುವಾಗ ಬೆತ್ತಲೇ ಹೋಗುವಾಗ ಕತ್ತಲೆ ಅಂದರೂ ಕೇಳದೇ ಪಾಪವೇ ಮಾಡಿ
ಪಾಶಣಕೆ ಸಿಲುಕಿ ಇಹಲೋಕ ಬಿಡುವವರನ್ನುಳಿಸಿ ಸುಭೋಧಿಸಿ ಮರಣಮೃದುಂಗ ನಿಲ್ಲಿಸು ದೇವಾ...

ಕೆಂಗಡಿಸಿದೆ ಕೋವಿಡ್ರಿಂಗಣಿಸುತ್ತಿದೆ ಸಾವಿನ ಸುದ್ಧಿ
ಫೇಸ್ಬುಕ್ ವಾಟ್ಸಾಪ್,ಟೆಲಿಗ್ರಾಮ್ ಮಾಧ್ಯಮಗಳು ಕಂಡು ಕಂಡಲ್ಲೆಲ್ಲ ಸಾವಿನ‌ಮಾತು
ಹಿಂಡಾಗಿ ಶವಗಾರಕೆ ಬರುವ ಹೆಣಗಳ ಕ್ಯೂ ನೋಡಿಯೂ ಸಾಯುವವರ ತಡೆದು ಮರಣಮೃದುಂಗ ನಿಲ್ಲಿಸು ದೇವಾ..

ಶವಕೆ ನೋಡುವಂತಿಲ್ಲ, ಕಡೆಮುಖ ದರ್ಶನವಿಲ್ಲ
ಎಲ್ಲೆಲ್ಲೋ ಹೋದವರು ಹೆಣವಾಗಿ ಮರಳುವಾಗ ಮಾನವರ ಮನ ಮನೆಯಲ್ಲೆಲ್ಲ
ಆಕ್ರಂದನದಿ ಸಾಯದಂತೆ ಮರಣಮೃದುಂಗ ನಿಲ್ಲಿಸುದೇವಾ..

ನಿನ್ನಾಜ್ಣೆಯಿಲ್ಲದೇ ಹುಲ್ಲುಕಡ್ಡಿಯ ಅಳುಗಾಡದೆಂಬ ನಂಬಿಕೆಯ ಜನ ನಾವು
ಮರಣ ಚಕ್ರದಿ ನಾಶವಾಗುತ್ತಿದ್ದೇವೆ ದಯತೋರಿ ರಕ್ಷಿಸಲು ಮರಣ ಮೃದುಂಗ ನಿಲ್ಲಿಸುದೇವಾ...

ಕಡೆಗೇಲಿಲ್ಲದ ಗಾಲಿಯಾಗಿ
ಯೋಗತನವ ಮರೆತು
ಮಹಾಂತನಾಗದೇ ಬರಿ ಭ್ರಾಂತಿಯಲ್ಲಿ
ಬದುಕಿ ಹೈರಾಣಾಗಿ ಜೀವ ಬಿಡುವುದನ್ನು ತಡೆಯಲು ಮರಣ ಮೃದುಂಗ ನಿಲ್ಲಿಸುದೇವಾ..© Mallikarjun Bhrungimath