...

18 views

ಲೇಖನಿಯ ತಾಕತ್ತು
ಅಪರಾಧವ ಬಯಲಿಗೆಳೆಯುವ ಶಕ್ತಿ
ಪತ್ರದಲ್ಲಿ ಪ್ರಕಟ ಮನದಿಂಗಿತದ ಆಸಕ್ತಿ
ಕತ್ತಿಗಿಂತ ಅಧಿಕವು ಲೇಖನಿಯ ತಾಕತ್ತು
ಇದಕ್ಕಿದೆ ಧರಣಿಯಲ್ಲಿ ವಿಶೇಷ ಗಮ್ಮತ್ತು

ಇರುಳಿನಲ್ಲೂ ಹೊಳೆವ ವಿಶಿಷ್ಟ ಲೇಖನಿ
ಚಿತ್ರಕ್ಕೆ ಜೀವ ತುಂಬುವ ವರ್ಣ ಲೇಖನಿ
ಅಳಿವು ಉಳಿವನ್ನು ನಿರ್ಧರಿಸುವ ಲೇಖನಿ
ಆಬಾಲ ವೃದ್ಧರಿಗೆ ಚಿರಪರಿಚಿತ ಲೇಖನಿ
© ಗುಡ್ಗೆಪೋರ
#ಲೇಖನಿ #pen #poem #Shayari