...

16 views

ನಿನ್ನೊಲುಮೆ ಆಸರೆ
ಲತೆಗೆ ಮರವೊಂದು ಆಸರೆ
ಜೀವಕ್ಕೆ ನಿನ್ನೊಲುಮೆ ಆಸರೆ
ಬಳ್ಳಿಗೆ ಪುಷ್ಪವೇ ಅಲಂಕಾರ
ಜೀವನಕ್ಕೆ ನೀನೇ ಅಲಂಕಾರ||1||

ಪುಷ್ಪಕ್ಕೆ ಸುಗಂಧವು ಭೂಷಣ
ಬಾಳಲ್ಲಿ ನೀನಿದ್ದರೆ ಭೂಷಣ
ಹರಡುವುದೆಲ್ಲೆಡೆ ಪುಷ್ಪಗಂಧ
ಬದುಕು ನಿನ್ನಿಂದಲೇ ಸುಗಂಧ||2||

ಆಗಸದಲ್ಲಿ ತಾರೆಗಳ ಹೊಳಪು
ಹೃದಯಾಕಾಶಕ್ಕೆ ನೀ ಹೊಳಪು
ಜಗವ ಬೆಳಗುವನೊಬ್ಬ ಭಾಸ್ಕರ
ಪ್ರೇಮ ಲೋಕಕ್ಕೆ ನೀನು ಇಂದಿರ ||3||
© ಗುಡ್ಗೆಪೋರ