...

3 views

"ನಯನದ ಮಾತು....👁
"ಕಣ್ಣಲಿ ಅಂದವಿದೆ
ಮನದಲಿ ನೋವಿದೆ

ಕಣ್ಣ ಮಾತುಗಳು
ಸಾವಿರಾರು

ಅದನು ಅರಿಯುವವರಾರು
ಪ್ರಿಯ ಸುಮ ನೀನಾರು

ಕಣ್ಣಿನ ಕಣಕಣದೆ
ಅವುಗಳ ಅಂದಕೆ

ಧೃಷ್ಟಿಯು ತಾಕದಿರಲಿ
ಚೆಲುವ ನಯನಕೆ

ಕಣ್ಣಲಿ ಕರೆಯುವ
ಭಾವಕೆ

ಸೋತ ಹೃದಯಕೆ
ಆಕರ್ಷಕ ಮನಕೆ

ಅಂದವು ಕಣ್ಣಲಿ
ಮೌನವು ಅದರಲಿ

ಏನಿಹುದು ಅರಿಯೆನು
ಈ ಭಾಷೆಯಲಿ

ನೂರಾರು ಮಾತಿದೆ
ಕಣ್ಣ ಕಣದಲಿ

ಬಿಡಿಸುವೆಯಾ ಮಾತಿನ
ಕ್ಷಣದಲಿ

ಆರಿಗೂ ತಿಳಿಯದೆ
ಈ ಕಣ್ಣ ಭಾಷೆಯದೆ

ಪ್ರೀತಿ ಇದೆ ಆಸೆ ಇದೆ
ಕನಸಿದೆ

ಸ್ನೇಹದ ಕರೆ ಇದೆ
ಬದುಕಿನ ಕನಸಿದೆ

ಇನ್ನೂ ಸಾಲದೇ
ಕಣ್ಣಿನ ಭಾಷೆಯದೆ

ಪ್ರಕೃತಿಯ ಸೊಬಗಿದೆ
ಗುಂಗಲಿ ಮರೆಸಿದೆ

ಕಣ್ಣಿನ ಸುಮವು
ಸದಾ ಅರಳಿ ನಗುತಿದೆ..,✍
💐shobha 💖