...

3 views

ಎತ್ತಲೂ (ಕ)ರೋನ
ಕವಿತೆ ; ರಚನೆ : ಭೃಂಗಿಮಠ ಮಲ್ಲಿಕಾರ್ಜುನ

ಎತ್ತ ನೋಡಿದರತ್ತ
ಕೊರೋನ ರೋಧನ
ಅಳವು ನೋವಲ್ಲೇ ತತ್ತರಿಸಿದೆ ಜನಮನ
ಅರ್ಥವಾಗುತ್ತಿದೆ ಇಷ್ಟೇನಾ ಜೀವನ?

ಯಾವ ಸಂಬಂಧಗಳಿಗಿಲ್ಲ ಶಾಶ್ವತತನ
ಅವರವರ ಜೀವಕ್ಕೆ ಪ್ರಶ್ನೆಯಾಗಿದೆ ರಕ್ಷಕತನ
ಜನಜಂಗುಳಿಯಿಂದಿದ್ದ ರಸ್ತೆಗಳೀಗ ಬೀಜೀತನ
ಭರ್ತಿಯಾಗಿವೆ ಹೆಣಗಳ ಕ್ಯೂನಲ್ಲೇ ಸ್ಮಶಾನ

ಮರಣ ಮೃದಂಗ ಕಲುಕಿದೆ ಪ್ರತಿ ಕೇರಿನ
ಬದಲಾಗ್ತಿದೆ ಕ್ಷಣಕ್ಷಣಕೆ ನರಕ ಜೀವಮಾನ
ಹಲಿಗೆ ,ಬಾಜಿ,ಎರಡಾರತಿಯಿಲ್ಲ ಬರಿ ಖಾಲಿತನ
ಭಂಧು ಬಳಗ ಸ್ನೇಹಿತರಿಲ್ಲದೇ ದೇಹ ದಹನ

ಹಣ ಸಂಪತ್ತು ಸೇರಿತು ಆಸ್ಪತ್ರೆಗಳ ಅಕೌಂಟುತನ
ಸಾಲಭಾಧೆ ಬದುಕುಳಿದ ಮನೆಯವರ ಭವಿಶ್ಯಕ್ಕೆ ಅದು ಶೂಲತನ

ಅರ್ಥವಾಗುತ್ತಿದೆ ಜನಕೆ ನಿಜ ಜೀವನ
ಬರುವಾಗ ಖಾಲಿ ಹೋಗುವಾಗ ಸತ್ಯವಿದು ಖಾಲಿತನ
ಬರೆದ ಕವಿ ಭೃಂಗಿಮಠ ನೋಡಿ ನಿತ್ಯ ಘಟನಾ
© Mallikarjun Bhrungimath