...

10 views

ಬಾಡಿದ ಹೂವು....
ಹೂವೆಕೋ ಗಂಭೀರವಾಯಿತು
ಸುವಾಸನೆ ಬೀರುವ ಮನಸಿಲ್ಲ
ಅರಳಿದರೆ ಸೊಗವಿಲ್ಲ
ಅಳುಕುತ್ತಲೇ ಅರಳುವುದು
ಹೂವಿನ ಪಡಾಯಿತು..

ಗುಡಿಸೆರುವೇನೋ....?
ಮುಡಿ ಯೇರುವೆನೋ..?
ಪಾದದ ಧೂಳಾಗುವೇನೋ..?

ಎಂಬ ಚಿಂತೆಯಲ್ಲಿ...
ಅರಳುವುದು......ಕಂಬನಿಗರೆಯುತ್ತಾ.
ಸಂತೈಸುವರಾರು ಇಲ್ಲದೆ
ಮಮ್ಮಲ ಮರುಗುತ್ತಾ
ಕ್ಷಣಗಳ ಎಣಿಸುತ್ತಾ...

ನೂರಾರು ಆಸೆಗಳ ಹೊತ್ತ ಮೊಗ್ಗು
ಅರಳುವಾಗ ಸಂತಸದಿ
ತುಗಾಡುವ ಪರಿಯು ಬಲ್ ಚಂದ.

ನೋಡುವ ಕಂಗಳಿಗೆ ಮುದ ನೀಡುತ್ತಾ
ಘಮಿಸುವ ಕಾಯಕವ
ಮೆಚ್ಚಿದನು ಮಾದೇವ...


ದೇವಿ ✍️

Related Stories