...

12 views

ವಾಸ್ತವ..‌
ಹೆಣ್ಣು, ಶಕ್ತಿಯ ಸ್ವರೂಪವಂತೆ...ಕ್ಷಮಯಾಧರಿತ್ರಿಯಂತೆ...ತಾಳ್ಮೆಯ ಗಣಿಯಂತೆ...ನಿಜ...ಎಲ್ಲವನ್ನೂ ಸಹಿಸಿಕೊಂಡು ಬಾಳುವ ಉತ್ತಮ ಗುಣ,ಸಂಸ್ಕಾರ ಹೆಣ್ಣು ಜೀವಕಿದೆ...ಆದರೆ ಸಮಾನತೆಯ ಹೆಸರಿನಲ್ಲಿ ಹೆಣ್ಣು, ಗಂಡಾಗುತ್ತಿದ್ದಾಳೆ...ತಪ್ಪಲ್ಲ ನಿಜ..ಸಮಾನತೆ ಅತ್ಯವಶ್ಯಕ... ಆದರೆ...?? ಗಂಡು ಮಾಡುವ ತಪ್ಪುಗಳನ್ನೆಲ್ಲ ಹೆಣ್ಣು ತಾನೂ ಮಾಡಿ,ತನ್ನ ಸಮಾನತೆಯ ತಾನು ಸಾರಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಗಂಡಿನಂತೆ ಹೊರ ದುಡಿಯುತ್ತಾ ಇದ್ದಾಳೆ.ಎಲ್ಲಾ ರಂಗಗಳಲ್ಲೂ ಇದಾಳೆ.ಗಂಡಿನಷ್ಟೇ ಶಿಕ್ಷಣ ಪಡೆಯುತ್ತಾ ಇದಾಳೆ ಎಲ್ಲವೂ ಹೆಮ್ಮೆಯ ವಿಷಯ... ಆದರೆ ಗಂಡಿನಂತೆ ಸ್ಮೋಕ್,ಡ್ರಿಂಕ್ಸ್, ಇನ್ನೂ ಅನೇಕ ಅನೈತಿಕ ಚಟುವಟಿಕೆಗಳಲ್ಲೂ ಸಮಾನತೆ ಎನ್ನುವುದು ಖೇದಕರ... ಹೆಣ್ಣು ಬಾಳಿನ ಕಣ್ಣು... ತಪ್ಪನ್ನು ತಿದ್ದಿ, ತೀಡುವ ಶಿಕ್ಷಕಿ ಆಗಬೇಕೇ ವಿನಃ,ತಾನೇ ತಪ್ಪು ದಾರಿ ತುಳಿದರೆ ಮುಂದಿನ ಪೀಳಿಗೆಗೆ ಉತ್ತಮ ಸುಸಂಸ್ಕೃತಿ ಕಲಿಸುವುದೆಲ್ಲಿಯ ಮಾತು?
ಎಷ್ಟೇ ಆಧುನಿಕತೆ ಮುಂದುವರೆದರೂ..ಎಷ್ಟೇ ಸಮಾನತೆ ದೊರಕಿದರೂ,ಬಟ್ಟೆ ಮುಳ್ಳಿನ ಮೇಲೆ ಬಿದ್ದರೆ ಹರಿಯುವುದು ಬಟ್ಟೆಯೇ ವಿನಃ,ಮುಳ್ಳಲ್ಲ...ಸಮಾನತೆ ಎನ್ನುವ ಹೆಸರಿನಲ್ಲಿ ಸ್ವೇಚ್ಛಾಚಾರದ ಬಾಳ್ವೆ ನಡೆಸುತ್ತಿರೋದು ಅಸಹ್ಯಕರ...ಮಕ್ಕಳು ತಪ್ಪು ಮಾಡಿದರೆ,ಬುದ್ಧಿ ಹೇಳಿ ತಿದ್ದುವುದು ಪೋಷಕರ ಕರ್ತವ್ಯ.ಆದರೆ ಹೆಚ್ಚಿನ ಪೋಷಕರೇ ತಪ್ಪು ದಾರಿ ತುಳಿದರೆ..ಮಕ್ಕಳನ್ನು ತಿದ್ದುವವರು ಯಾರು? ಉಫ್!! ಬರೆಯುತ್ತಾ ಹೋದರೆ ಮುಗಿಯದ ಕಥೆ..ಆದರೂ ಇಂತಹ ಸ್ವೇಚ್ಛೆ ನೋಡಿದಾಗೆಲ್ಲ ,ಇಂದಿನ ನಡೆಯ ಮೇಲೆಯೇ ಅಸಹ್ಯಕರ ಭಾವ ಉಂಟಾಗುತ್ತದೆ... ಪುಟ್ಟ ಪುಟ್ಟ ಮಕ್ಕಳು, ಸ್ಕೂಲ್ ಗೆ ಹೋಗುವ ಮಕ್ಕಳ ಬಾಯಲ್ಲಿ, ಚಾಕಲೇಟ್ ಬದಲು,ಗುಟ್ಕಾ, ಸಿಗರೇಟ್ ಕಂಡಾಗ, ಕಲಿಸುವ ಶಿಕ್ಷಕರ ಸಮ್ಮುಖದಲ್ಲೇ ಆ ಎಳಸು ಮನಸು ಧಮ್ ಹೊಡೆವಾಗ,ಮನಸ್ಸು ವಿಚಲಿತವಾಗುತ್ತದೆ...ಕೇವಲ ಇಪ್ಪತ್ತು ವರ್ಷಗಳ ಅಂತರದಲ್ಲಿ ಮನುಜನ ಬದುಕು ಎಂತಹ ದಾರುಣ ಸ್ಥಿತಿ ತಲುಪಿದೆ ಎಂಬ ಮನವರಿಕೆ ಉಂಟಾದಾಗ..ಇನ್ನೂ ಮುಂದಿನ ದಿನಗಳ ನೆನೆದು ಮನಸ್ಸಿಗೆ ನಡುಕ ಉಂಟಾಗುತ್ತದೆ...ಹಿರಿಯಕ್ಕನ ಚಾಳಿ ಮನೆ ಮಂದಿಗೆ ಅನ್ನುವ ನಾಣ್ಣುಡಿಯಂತೆ,ಪೋಷಕರ ದಿನಚರಿ, ಸಂಸ್ಕಾರದ ಮೇಲೆ ಅವರವರ ಮಕ್ಕಳ ಭವಿಷ್ಯ ನಿರ್ಧರಿತ....

ಮುದ್ದು ತಮ್ಮ, ಅರು ಮಾಡಿದ ಪೋಟೋ ಎಡಿಟ್ ಗೆ ಹೊಳೆದ ವಿಚಾರ ಧಾರೆ ಅಷ್ಟೇ....😊😬ಕಾಲಾಯ ತಸ್ಮೈ ನಮಃ...ಬದುಕಿನ ಬಂಡಿ ಸಾಗುವವರೆಗೆ ಸಾಗುತಲಿರೋಣ..ನೋಡಿದರೂ ನೋಡದ ಹಂಗೆ😂