...

11 views

ಸದ್ದಿಲ್ಲದ ಸಂತ
🙏ಸದ್ದಿಲ್ಲದ ಸಂತ 🙏

ಸದ್ದು ಮಾಡದ ಸಂತ
ಶಾಂತನಾದ ಮಹಾತ್ಮ
ಪರಿಶುದ್ಧ ಆತನಾತ್ಮ

ನಡೆದಾಡಿದ ದೇವರು
ಪರಮ ಶ್ರೀ ಪೂಜ್ಯರು
ಕಾಯಕ ಮಂತ್ರ ಸಾರಿದರು

ಪಂಚಭಾಷಾ ಪ್ರವೀಣರು
ದೇಶವಿದೇಶ ಪ್ರವಚನಿಸಿದರು
ಸರಳ ಸಜ್ಜನಿಕೆಯ ಸಂತರು

ಸಿದ್ಧನಂತಹ ಸರಳ
ಜಗದಲಿ ಬಲು ವಿರಳ
ಪ್ರವಚನದಲಿ ನಿರ್ಗಳ

ಜೇಬಿಲ್ಲದ ಬಿಳಿ ವಸ್ತ್ರ
ತಿರಸ್ಕರಿಸಿದರು ಎಲ್ಲಾ ಪ್ರಶಸ್ತಿ ಪತ್ರ
ಮಾನವಿಯತೆಯೊಂದೆ ಮಹಾಮಂತ್ರ

ಬಯಲಲಿ ಬಯಲಾದ
ಶೂನ್ಯ ಪೀಠದ ಸಂತ
ಕಂಬನಿಯು ಹರಿಯುತಿದೆ ನಾಡಿನಾದ್ಯಂತ

✍️ ಶ್ರೀಮತಿ ಮಾಧುರಿ ಎಸ್ ಕೆ