...

5 views

ಮುಂಜಾವಿನ ಸೊಬಗು.
ಮುಂಜಾವಿನ ಸೊಬಗು
•••••••••••••••••••••••••

ಮೂಡಣದಲಿ ಮೂಡಿಹನು ಚೆಲುವ ನೇಸರನು
ಬಣ್ಣದೋಕುಳಿಯಲಿ ಮಿಂದಿಹನು ಸೂತ್ರದಾರನು

ಎತ್ತೆತ್ತಲೂ ರಂಗುರಂಗಿನ ಹೊನ್ನಘಮಲು
ಮುಂಜಾನೆಯಾಯಿತು ಸಂತಸದ ಹೊನಲು

ಜನತೆಯ ವದನದಿ ನಗುನಗುವಿನ
ಕಳೆ
ನಿತ್ಯದ ದುಡಿಮೆಗೆ ಕಿರಣಗಳ ಹೂಮಳೆ

ನೋವುಗಳ ಮರೆತು ಮಂದಹಾಸವ ಬೀರುವರು
ಕಷ್ಟಸುಖಗಳ ಅರಿವನು ಅರಿಯುವರು

ಸಂಭ್ರಮದಿ ಈ ದಿನವ ಕಳೆಯುವರು
ನಗುನಗುತಲಿ ಮುನ್ನುಡಿ ಬರೆಯುವರು.

🌷🌺🌷🌺🌷🌺🌷🌺🌷
✍️ ಅರ್ಚನಾ. .