...

6 views

ನಾಯಕ ನಟ An Ating Skill.
ನಾಯಕ ನಟ
ಮಾತು ಅತಿ ಮಧುರ
ಕಣ್ಣೋಟವೇ ಸುಮಧುರ..
ಆಕರ್ಷಕ ನೋಟದಿಂದ
ಎಲ್ಲರು ಮೂಖವಿಸ್ಮಿತ..

ನಾಯಕನಾಗಲು ಸೈ
ಖಳನಾಯಕನಾಗಲು ಜೈ
ಅರಸ, ಭಿಕ್ಷುಕ ಏನಾದರೇನು
ನಟನಿಗೆ ಪಾತ್ರಗಳ‌ಹಂಗಿದೆ ಏನು!?

ಜನರ ಮನಮೆಚ್ಚಿದ‌ನಾತ
ಜನರ ಮನ ರಂಜಿಸುವಾತ
ನಟನೆಯಲ್ಲೇ‌ಜೀವನ ಕಳೆಯುತ
ಬದುಕಿನುದ್ದಕ್ಕೂ ಕಲಿತು ಬೆಳೆಯುವನಾತ..

ಬಣ್ಣ ಕರಗಿದ ಬದುಕು
ಇನ್ನು ಬಾರದು ಉಸಿರು..
ಹೊನ್ನ ಗುಣದವನಾದರೇ ನೀ
ಮಣ್ಣ ಸೇರಿದರೂ ಉಳಿವುದು ನೆನಪು..

ಸಿಂಧು ಭಾರ್ಗವ‌ ಬೆಂಗಳೂರು
© Writer Sindhu Bhargava