...

72 views

ನೆಮ್ಮದಿ
ಅಂತರಾತ್ಮನ ಒಲವಿನಲಿ
ಕಡಲಾಂಬೆಯ ಮಡಿಲಿನಲಿ
ತವಕಿಸುವ ಅಲೆಯ ಸದ್ದಿನಂಗಳದಿ
ಸಂಗೀತದ ರಸದೌತಣ
ಯೋಚನೆ ಆಲೋಚನೆಗಳ ಬದಿಗಿರಿಸಿ
ಹಿತ ನೀಡುವ ಜೀವದೊಡನಾಟ
ನೇಸರನಂಗಳದಿ ವ್ರಕ್ಷವೊಂದು ಹಬ್ಬಿ
ಆಯಾಸಗೊಂಡ ಜೀವಕ್ಕೆ ನೆರಳುಣಿಸಿದಂತೆ
ಕಲ್ಪನೆಯೋ ನಿಜವೋ ಅರಿಯದಾದರು
ಪುಟಿದೇಳುವ ಮನದ ನೆಮ್ಮದಿಗೆ ಭಂಗವೇನಿಲ್ಲ....