...

3 views

ಬಾಳತೇರಿನ ಉತ್ಸವ


ಬಾಳ ತೇರಿನಲ್ಲಿ ಉತ್ಸವ ಹೊರಟಾಗಿದೆ
ನಡುವೆ ಅನೇಕ ಮುಖಗಳು ಪರಿಚಯವಾಗಿದೆ
ಪಾಠ ಹೇಳಿಕೊಡಲು ಜನರೆಲ್ಲ ಬಂದಿಹರು
ಮಗುವಿನಂತೇ ಕೇಳಲು ನಾವು ಸಿದ್ಧರು
ಬುದ್ಧಿ ತಿದ್ದಿ ಹೇಳುವ ಶಿಕ್ಷಕರಂತಿಹರು
ಕೆಲವರು ಬೀಳಿಸಿ ತಮಾಷೆನೋಡಲು ಬಂದಂತಿಹರು
ಅನುಭವವ ಪಡೆಯಲು ಸಿಧ್ಧವಿರುವಂತೆ ಕಾಣುವೆವು
ಸಂತೋಷದಲ್ಲಿ ಕೂಡ ಒಮ್ಮೊಮ್ಮೆ ಅಳುವಂತಿಹೆವು
ಇಲ್ಲಿಹೇಳದೆ ಜೀವನಕ್ಕೆ ಬಂದ ಮನಸುಗಳೆಷ್ಟು
ಬಿಟ್ಟು ಹೋದ ಅನೇಕ ಮಂದಿಯೆಷ್ಟು
ಬಾಳೊಳಗೆ ಉತ್ತರ ಸಿಗದ ಪ್ರಶ್ನೆಗಳೆಷ್ಟೋ
ಹಾಗೇ ನನಸಾಗದೆ ಉಳಿದ ಕನಸುಗಳೆಷ್ಟೋ
ಕ್ಷಣಿಕ ಸುಖದ ಆಸೆಗಳಿಗೆ ಮರುಳಾದವರೆಷ್ಟೋ
ಮೋಹದ ಪಾಶದ ಜಾಲದೊಳಗೆ ಬಲಿಯಾದವರೆಷ್ಟೋ
ಜೀವನದಿ ಮೋಸ ಹೋದ ಜನರೆಷ್ಟೋ
ಮನನೊಂದು ಮಾನಸಿಕ ಒತ್ತಡದಿ ನಲುಗಿದವರೆಷ್ಟೋ
ಜೀವನವೆಂಬ ನಾಟಕಕೆ ತೆರೆ ಎಳೆವ ಸಮಯ ಬಂದಾಗ
ನ್ಯಾಯ ಅನ್ಯಾಯದ ತುಲನೆ ನಡೆವುದಾಗ
ಕಾಲನ ಕರೆ ಕೇಳಲು ವಿಧಿಯೆಡೆಗೆ ಸಾಗಬೇಕು
ಸೌಂದರ್ಯದ ಕಾಯವು ಮಣ್ಣೆಂಬ ಸತ್ಯ ತಿಳಿಯಬೇಕು

ರಾಧಿಕಾ ಗಿರೀಶ್ ಮಯ್ಯ