...

17 views

ನಿನ್ನ ಸೆಳೆತ
ಕೇಳೇ ಹುಡುಗಿ,

ನಿನ್ನ ಪ್ರೇಮಕ್ಕೆ ಮನಸೋತ ಮನ್ಮಥ ನಾನು
ನಿನ್ನ ನಯನದ ಆಕರ್ಷಣೆಗೆ ನೀರಾದ ನಲ್ಲ ನಾನು

ನಿನ್ನ ಹೃದಯವ ಕದಿಯಲು ಹೋಗಿ ಅದರೊಳಗೆ ಬಂಧಿಯಾದ ಖೈದಿಯು ನಾನು

ನಿನ್ನ ನಗುವಿಗೆ ಜಾರಿಬಿದ್ದ ಕುರುಡ ನಾನು
ನಿನ್ನ ನುಡಿಯ ಆಲಿಸಿ ಮಾತು ಕಳೆದುಕೊಂಡ ಮೂಕ ನಾನು

ಮುಂಗುರುಳು ತೀಡುತ್ತಾ ಬಳುಕುತಾ ನಿನ್ನ ಹಂಸ ನಡಿಗೆಯ ಕಂಡು ಕಲ್ಲಾದ ಗೋರ್ಖಲ್ಲು ನಾನು..

ನಿನಗಾಗಿ ,ನಿನ್ನ ಪ್ರೀತಿಗಾಗಿ ಎಲ್ಲವನ್ನು
ಕಳೆದುಕೊಂಡು ......ದುರ್ಧೈವಿ ನಾನು

ನಿನ್ನ ಸೆಳೆತಕ್ಕೆ ಬಲಿಯಾದ ಭಗ್ನಪ್ರೆಮಿಯು ನಾನು...