...

26 views

ಕಂಬನಿ ಖಾಲಿಯಾಗಿದೆ
ನಿಂತರೂ ಕುಂತರೂ
ನಿನ್ನದೇ ನೆನಪಲ್ಲಿ
ನೆನೆ ನೆನೆದು ದುಃಖಿಸಿದೆ
ಈ ಮನ .

ಅತ್ತೂ ಕರೆದೂ
ಬಡಿದು ಕೊಂಡಿದೆ
ಈ ಹೃದಯ ..
ಸಹಿಸದೆ ಈ ದೂರವ ..

ಕಂಬನಿಯ ಮಳೆಗರೆದು
ಶೋಕ ಸಂತಾಪ ಸೂಚಿಸಿದೆ
ವಿರಹದ ಪ್ರೀತಿಗೆ..

ದಿಕ್ಕೆಟ್ಟು ದಿಗಿಲಾಗಿದೆ
ಭವಿಷ್ಯದ ಭೀತಿಗೆ...

ತನು ಮನಗಳೆರೆಡೂ
ತೂಗಾಡಿದೆ ನಿರಾಶೆಯ
ನೇಣಿನ ಕುಣಿಕೆಯಲಿ...

ಇನ್ನೆಲ್ಲಿಯ ಕಣ್ಣೀರು ...ಅಳಲು
ಕಂಬನಿಯು ಖಾಲಿಯಾಗಿದೆ....
ಕಣ್ಣ ಕೊಳದಲ್ಲಿ......

@ದೇವಿ✍️