...

12 views

ಓ ಗೆಳೆಯ..
ಮನಸಲೇ ಮಂಡಿಗೆ ತಿನ್ನಬೇಡ
ಓ ಗೆಳೆಯ...
ಬಳಿ ಬಂದು ತೊಡಿಸು ನೀ ಉಂಗುರ
ಅರಿಯಲಾರದಷ್ಟೂ
ಶತ ದಡ್ಡಿ ನಾನಲ್ಲ..
ಸಾರಿ ಸಾರಿ ಹೇಳುತಿವೆ ನಿನ್ನ ಕಂಗಳೇ
ನೋಡು..ನೀ ಸುರಿಸುವ ಒಲವ
ಧಾರೆಯ ಆಳ
ಜೊತೆಗೂಡಿ ಹೆಜ್ಜೆ ಇಟ್ಟು ನಡೆದರೆ
ಜೀವಿಸುವೆವು ಬಂಗಾರದ ಬಾಳ
ಗೆದ್ದು ಬೀಗುತಿಹೆ ನೀ ನನ್ನ ಹೃದಯ
ಸೋತು ಗೆದ್ದು ಹೆಮ್ಮೆ ಪಡುತಿರುವೆ ನಾ
ಕದ್ದು ನಿನ್ನ ಮನಸ..
ಕಾಯುತಿಹುದು ನನ್ನ ಬೆರಳು
ನೀ ತೊಡಿಸುವ ರಿಂಗಿನೊಳು
ನುಸುಳಲು
ಬರೆದು ಬಿಡು ಪ್ರೇಮದಲೇ ಒಲವಿನಧ್ಯಾಯ
ಪಡೆಯೋಣ ಒಮ್ಮತದಿ ಸಮರಸದ ಪಾಠದನುಭವ...