...

3 views

ಶರಪಂಜರದಿ ಬಂಧಿ
ಶರಪಂಜರದಲಿ ನಾ ಬಂಧಿ

ಎಲ್ಲೋ ಅಳುವ ಧನಿ.ಸ್ವರ ಬಂದತ್ತ ಅರಸಿ ಬಂದೆ😄.ಕಪಾಟಿನಿಂದ ಕೇಳ್ತಿತ್ತು😊.ಅರೇ,ಅಲ್ಲಿ ಯಾರಿದಾರೆ ಅಂತ ನೋಡೇಬಿಡೋಣ ಅನ್ಕೊಂಡು ಡೋರ್ ಓಪನ್ ಮಾಡಿದೆ ಅಷ್ಟೇ😄.ಡಬಾರ್ ಅಂತ ಒಂದರ ಹಿಂದೆ ಒಂದು ಸೀರೆಗಳು ಕೆಳಕ್ಕೆ ಬೀಳತೊಡಗಿತು ಉರುಳುರುಳಿ.😞
ಅಯ್ಯೋ ತಡೀರಪ್ಪಾ..🖐️ಯಾಕ್ ಬೀಳ್ತಿದೀರಾ..ಇರೀ ಅಂತ ಮೆತ್ತಗೆ ಅಪ್ಪಿಕೊಂಡೆ...ಮಕ್ಕಳು ಕೊಸರುವಂತೆ,ಹುಸಿಮುನಿಸಿನಿಂದ ಕೊಸರಿ ದೂರ ಸರಿದವು..😣.

ಅಂತೂ ಬಿಗಿದಪ್ಪಿ,ಮುದ್ದು ಮಾಡಿ ,ರಮಿಸಿ ಕೇಳಿದೆ ಯಾಕಿಷ್ಟು ಕೋಪ ಅಂತ😄.ಆಗ ಗೊತ್ತಾಯ್ತು.. 😊ಈ ವರ್ಷ ಇಡೀ,ಕಪಾಟಿನಲ್ಲಿ ಲಾಕ್ ಡೌನ್ ಮಾಡಿದೀಯಲ್ವಾ ನೀ ನಮ್ಮ😢.ಎಂಬ ಆರೋಪ ನನ್ನ ಮೇಲೆ😄.ನಾನೇ ಲಾಕ್ ಡೌನ್ ಆಗಿದೀನಿ.. ನಿಮ್ಮ ಹ್ಯಾಂಗೆ ಹೊರ ತರಲಿ ಎಂಬುದು ನನ್ನ ಸಮರ್ಥನೆ😄...ಅಂತೂ ಹಗ್ಗ ಜಗ್ಗಾಟದಿಂದ,ಸೋಲು ಗೆಲುವು ತೀರ್ಮಾನ ಆಗದಾಯಿತು...ಶ್!!ಮೆಲ್ಲಗೆ ಮಾತಾಡಿ..ನನ್ನವರು ಕೇಳಿಸಿಕೊಂಡ್ರೆ ಕಥೆ ಅಷ್ಟೇ... ಮತ್ತೆ ಹೊಸ ಸೀರೆ ತರರು ಆಮೇಲೆ ಅಂದೆ😛.ಅವಕ್ಕೂ ಒಂತರಾ ಜಲಸ್ ನೋಡಿ😄.ನಮ್ಮ ಬಿಟ್ಟು ಇನ್ನೂ ಹೊಸದು ಬೇಕಾ..ಅಂತ ಕೂಗೇ ಬಿಡೋದೆ😁😁.ಅವನ್ನು,ಸುಮ್ಮನಿರಿಸುವ ಪ್ರಕ್ರಿಯೆಯಲ್ಲಿ ಸೋತು ಸುಣ್ಣ ಆದೆ🙊😁.

ಹ್ಮ..ಊರಲ್ಲಿ ಮೊನ್ನೆ ನನ್ನ ಮಾವನ ಮಗನ ಮದ್ವೆ ಇತ್ತು..ಹೋಗೋಕೆ ಅಂತ ರೇಶ್ಮೆ ಸೀರೆ ರೆಡೀ ಮಾಡಿ ಇಟ್ಟಿದ್ದೆ..😁.ವಯಕ್ತಿಕ ಕಾರಣದಿಂದ ಹೋಗೋಕೆ ಆಗಲೇ ಇಲ್ಲ🙄.ಸೀರೆಗೆ, ನೋಡಿ ನೋಡಿ ಸಾಕಾಗಿದೆ.😂.ನನ್ನ ರೆಡೀ ಮಾಡಿಟ್ಟು,ಹೊರಗೆ ತೆಗೆದೇ ಇಲ್ಲ...