...

1 views

ನಿನ್ನ ಮಾತಿನ ಗಮ್ಮತ್ತು
ನಿನ್ನ ಪ್ರತಿ ಪದಕ್ಕೊಂದು
ಬರಿಲೇನು ನಾ ಕವಿತೆಯೊಂದು
ನಿನ್ನ ಉಸಿರಿನಿಂದ ಬರುವ ದ್ವನಿಗೆ
ನಾ ಹೆಸರಾಗಿ ನಿನ್ನ ಜೊತೆ ಕೊನೆತನಕ ಉಳಿಯಲೇನು..

ಹೇಯ್ ಮುಖವೇಧನೆಯ ಮೌನ
ಅರಿತು ಬಿಡು ನೀ ಒಮ್ಮೆ ನನ್ನನ್ನು
ನಿನಗೆ ಹೇಳಲಾಗದ ಮಾತುಗಳು
ಏಷ್ಟೋ ಇವೆ ಸುಮ್ನೆ ಒಂದು ಸಲ
ನಕ್ಕು ನನ್ನೊಳಗೆ ನೀ ಬೇರೆತುಬೀಡು

ಕಣ್ಣಲ್ಲಿ ಕಾಣುವ ಕಾಂತಿಗೆ ಸಾಕ್ಷಿ ನೀನು
ಪದೇ ಪದೇ ನಿನಗೆ ರುಜುವಾತು ಮಾಡಬೇಕು
ಯಾಕೆ ನಾನು...ಬಾ ನನ್ನೊಳಗೆ ನೀ
ಮುಂಜಾನೆಯ ಬೆಳಕಾಗಿ ಜೊತೆಗೂಡಿ
ಹೋಗೋಣ ನಾವಿಬ್ಬರೂ ನೆರಳಾಗಿ.....

#ರೀನಾ