...

3 views

"ಭಟ್ಟರು ನಾವು ಭಟ್ಟರು "
*"ಭಟ್ಟರು ನಾವು ಭಟ್ಟರು"*

ಭಟ್ಟರು ಸ್ವಾಮಿ ನಾವು ಭಟ್ಟರು
ತಿಳಿಯದಿರಿ ನಾವು ಮೂರೂ ಬಿಟ್ಟವರು
ಹಸಿದು ಬರುವ ಜನರಿಗೆ ಬಿಸಿಬಿಸಿ
ಅಡುಗೆ ಮಾಡಿ ಹೊಟ್ಟೆ ತುಂಬಿಸುವವರು

ಹುಟ್ಟಿ ಬೆಳೆದ ಊರು ಬಿಟ್ಟವರು
ತಟ್ಟೆ ಲೋಟ ಸ್ವಚ್ಛವಾಗಿಟ್ಟವರು
ಬಟ್ಟೆ ನೋಡಿ ಬೆರಗಾಗಬೇಡಿ
ತಟ್ಟೆಯಲ್ಲಿನ ತಿನಿಸ ತಿಂದು ನೋಡಿ

ಉಳಿದಿರುವ ಮುಸುರೆ ತಿಪ್ಪೆಗೆಸೆಯದೆ
ವಿಂಗಡಿಸಿ ದನಕರುಗಳಿಗೆ ಹಾಕುವ
ಹೋಟೆಲ್ ಕಾರ್ಮಿಕರು ನಾವು
ನಮ್ಮನ್ನು ಕೀಳಾಗಿ ಕಾಣದಿರಿ ನೀವು

ಎಲ್ಲರಿಗೂ ಸಮಾನತೆ ಎನ್ನುವವರೇ
ನಮಗೂ ಸಮಾನತೆ ಅವಕಾಶ ಕೊಡಿ
ಬೊಗಳೆಯ ಮಾತುಗಳನ್ನಾಡ ಬೇಡಿ
ನಮಗೂ ಕಾರ್ಮಿಕರ ಗುರುತು ಕೊಡಿ

ಮನೆ ಪರಿವಾರಗಳು ನಮಗೂ ಇವೆ
ನಂಬಿ ಬದುಕುವ ಜೀವಗಳೂ ಇವೆ
ಕಾರ್ಮಿಕರಿಗೆ ಸಮಸ್ಯೆಗಳೂ ಇವೆ
ಬಗೆಹರಿಸುವ ಕೈಗಳು ಬೇಕಾಗಿವೆ

ಅಂಗೈಯಿಂದ ಉಂಡವರ ತಟ್ಟೆಗಳ
ತೊಳೆಯವವರನು ಮರೆಯಬೇಡಿ
ಮುಸುರೆ ತಿಕ್ಕುವರ ಬಾಳಲ್ಲಿ ನೆಮ್ಮದಿ
ಬರಲೊಂದು ಅವಕಾಶ ಮಾಡಿ ಕೊಡಿ..!🙏

*_✍️ನಿಗೂಢ ಹುಬ್ಬಳ್ಳಿ.*
(ಗುರು ಢವಳೇಶ್ವರ)
© All Rights Reserved