...

0 views

ಡೋಂಗಿಗಳೋ
ಕವಿತೆ ರಚನೆ:ಭೃಂಗಿಮಠ ಮಲ್ಲಿಕಾರ್ಜುನ.
ಶೀರ್ಷಿಕೆ: ಢೋಂಗಿಗಳೋ

ಡೊಂಗಿಗಳೋ
ಇವರು ಢೋಂಗಿಗಳೋ

ಕನ್ನಡದ ಹೆಸರಲ್ಲಿ ಪರಿಷತ್ತಿಗೆ ಬಂದು ರಾಜಕಾರಣ ಮಾಡುತ್ತಾ ಜಾತಿ ವಿಷ ಬೀಜದ ಮೊಳಕೆ ಸೃಷ್ಠಿ ರಾಜಕೀಚಕತನ ತೋರಿದ ಡೋಂಗಿಗಳೋ ಇವರು ಡೊಂಗಿಗಳೋ

ಸ್ವಜನ ಪಾತ ನಿರ್ಮಿಸಿ
ಕುತಂತ್ರದಿ ಸಭೆ ನಡೆಸಿ
ಹಿರಿಯ,ಯುವ,ಮಹಿಳಾ ಸಾಹಿತಿಗಳಿಗೆ ದೂರ ವಿರಿಸಿ
ಬರಿ ಬಾಲಂಗೋಚಿಗಳ ನಡುವೆ ಫೋಜು ಗಿಟ್ಟಿಸಿ ಪ್ರಚಾರ ಪಡೆವ ನಾಚಿಕಿಯಿಲ್ಲದ ಢೋಂಗಿಗಳೋ ಇವರು ಢೋಂಗಿಗಳೋ

ಸೀಮಿತ ಜಾತಿಯ ಮತವ ಮಾಡಿಸಿ
ಒಳೊಗೊಳಗೆ ಹಣವ ಕೊಳ್ಳೆ ಹೊಡೆದು
ಜನರ ಭಾವನೆಗಳ ಲಾಭ ಪಡೆದು
ಮತ್ತದೇ ಚಾಳಿಗೆ ಸಾಗುತಿಹ ಪರಿಷತ್ತಿನಲ್ಲಿ ಕಚ್ಚಾಡುವ ನಾಟಕವಾಡಿದ ಡೊಂಗಿಗಳೋ ಇವರು ಢೋಂಗಿಗಳೋ

ಜನರಿಂದ ದೇಣಿಗೆ ಪಡೆದ ಹಣಕೆ
ಲೆಕ್ಕ ಪತ್ರವ ನೀಡದೇ
ವ್ಯವಸ್ಥಿತವಾಗಿಹಣವ ಗುಳುಂ ಮಾಡಿ
ನಿತ್ಯವೂ ಕಾಲ ಕಳೆದು
ಪಕ್ಷರಾಜಕಾರಣ ಮಾಡುವ ಡೋಂಗಿಗಳೋ ಇವರು ಢೋಂಗಿಗಳೋ

ಒಂದು ಚುನಾವಣೆಯಲ್ಲಿನ ಒಬ್ಬೊಬ್ಬರಿಗೊಂದು ಆಶ್ವಾಸನೆ ನೀಡಿ ಗೆದ್ದ ಮೇಲೆ ಕ್ಯಾರೆ ಅನ್ನದೇ ಗೆದ್ದ ಎತ್ತಿನ ಬಾಲ ಹಿಡಿಯುವ ಶುದ್ಧ ಸಾಹಿತ್ಯದ ವೈರಿಗಳೋ ಇವರು ಡೋಂಗಿಗಳೋ ಇವರು ಢೋಂಗಿಗಳೋ

ಅನ್ಯರಿಗೆ ಅವಕಾಶ ನೀಡದೇ
ತಾನೇ ಪದೇ ಪದೇ ಎಂದ್ಹೇಳಿ
ಎದುರು ನಿಂತವರಿಗೆ ಬಿಸ್ಕಿಟುವತಿನ್ನುವ ನಾಯಿಗಳಿಗೆ ಛೂ ಬಿಟ್ಟು ಸುಳ್ಳು ಸುದ್ಧಿಯ ಹರಡಿಸಿ ಮೋಸದಿ ಮತ ಪಡೆಯುವ ಯೋಚನೆಯ ಡೋಂಗಿಗಳೋವಿವರು ಢೋಂಗಿಗಳೋ

ದಶಕ ಕಳೆದರೂ ಹಸಿರ ಸೃಷ್ಠಿಸದೇ
ಕೆಸರಾಟದಲಿ ತೊಡಗಿ ರಸಲೀಲೆಯ ಮೊಳಗಿಸಿ
ಕಸದ ತೊಟ್ಟೆಯ ಮಾಡಿ ಪರಿಷತ್ತು ಹಾಳು ಮಾಡಿದ ಡೋಂಗಿಗಳೋ ಇವರು ಢೋಂಗಿಗಳೋ

ಜಾತ್ಯಾತೀತ..ಶರಣು ಶರಣು ಎಂದು ಬಾಯಿಲೆ ಹೇಳಿ ಬರಿ ಹಗರಣ ಮಾಡಿ ಮೋಸದ ಆರೋಪ ಹೊತ್ತು ಸಾಚಾತನ ತೋರುತ
ಹೇಸಿಯಾಗಿದೆ ಎಂದು ತಾವೇ ಹೇಳಿ
ನಾಟಕವಾಡು್ ಡೋಂಗಿಗಳೋ
ಇವರು ಢೋಂಗಿಗಳೋ

ಹೊಸ ನೀರು ತುಂಬದೇ
ಹಳೆ ಜಾಡು ಕಟ್ಟಿದ ರಾಜಕೀಯ ಸ್ವಚ್ಛಗೊಳಿಸದೇ ತಾವೇ ಜಂಗು ಹಿಡಿದವರಾಗಿ ಕಾಣುತಿರುವ ಖುರ್ಚಿಗೆ ಜೋತು ಬಿದ್ದ ನಿರಾಶ್ರಿತ ಡೋಂಗಿ ರಾಜಕಾರಣಿಗಳೋ ಇವರು ಡೋಂಗಿಗಳೋ

ಚುನಾವಣೆ ಬಂದಾಗ ತಪ್ಪಾತು,ಕಾಲು ಹಿಡಿತೀನಿ
ನನ್ನ ಮಾನ ಉಳಿಸಿ ಎಂದು ಸಂದ್ಯಾಗ ಮಂದಿಯ ಕಾಲು ಹಿಡಿದು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲವೆಂದು ಹೇಳಿ ಆಣಿ ಮಾಡಿ ಮಾತಿಗೆ ತಪ್ಪಿದ ಮಗನಾದ ಡೋಂಗಿಗಳೋ ಇವರು ಢೋಂಗಿಗಳೋ...
© Mallikarjun Bhrungimath

Related Stories