...

14 views

ಅವನಿಚ್ಚೆಯಂತೆ!!
ಇಲ್ಲಿ ಯಾರು ಯಾರನ್ನು
ಬೆಳೆಸಲು ಸಾಧ್ಯವಿಲ್ಲ,
ತುಳಿಯಲು ಸಾಧ್ಯವಿಲ್ಲ!!
ಕೇವಲ ಪಥ, ತೋರಿಸಬಹುದಷ್ಟೆ.

ಆಯ್ಕೆ, ಬೆಳವಣಿಗೆ, ಅಧಃಪತನ!
ಎಲ್ಲವೂ, ಮೇಲಿನವನ,
ಆಜ್ಞೆಯಂತೆಯೇ ನಡೆಯುತ್ತದೆ.
ಎಲ್ಲವೂ ಪೂರ್ವ ನಿರ್ಧಾರಿತ!!

ನಾನು, ನನ್ನದು, ನನ್ನಿಂದ!!
ಎಂಬ ಭ್ರಮೆಯ ಪೊರೆ ಕಳಚಿ,
ಒಮ್ಮೆ ಯೋಚಿಸು,
ಹೋಯ್ ನರ ಮಾನವ !

ಒಂದು ನರ ಸ್ಥಗಿತಗೊಂಡರು,
ಹಾಸಿಗೆಯಿಂದ ಮೇಲೇಳಲು,
ಸಾಧ್ಯವಿಲ್ಲ, ಪರಾವಲಂಬಿಯಾಗುವೆ!
ಆದರೂ ಈ ಅಹಂಕಾರವೇಕೆ?

ಎಂದು ಅರಿಯುವೆ ನೀನು,
ತೃಣದಲ್ಲಿ ತೃಣ ನೀನು,
ನಡೆಯದು ಯಾವುದೂ ಎಣಿಸಿದಂತೆ,
ತಿಳಿದು ಬದುಕ ಬೇಕಿದೆ, ಅವನಿಚ್ಚೆಯಂತೆ!

ಹುಟ್ಟು ಸಾವಿನ ನಂಟು!
ಬ್ರಹ್ಮ ಹಾಕಿದಾ ಗಂಟು!
ಕದಿಯಲಾಗದ ಗಂಟು, ಪಾಪ ಪುಣ್ಯವಂತೆ!
ಅರಿತು ಬದುಕಿದರಷ್ಟೆ, ಸಂತೋಷವಂತೆ!!
© ಮಂಜುನಾಥ್.ಕೆ.ಆರ್