...

39 views

ಮೋಸದ ಒಲವು
ಒಲವೇ ನೀನೆಲ್ಲಿ ಕಾಣದಂತೆ ಮಾಯವಾದೆ?
ನಿನ್ನನ್ನು ಹುಡುಕುತ್ತಾ ನಾ ಬಸವಳಿದು ಹೋದೆ!
ಕನಸಲ್ಲೂ ನೀನೇ ಮನದಲ್ಲೂ ನೀನೇ
ಬಾನಲ್ಲೂ ನೀನೇ ಭುವಿಯಲ್ಲೂ ನೀನೇ
ಕಂಡ ಕನಸಿಗೂ ಬಹುಶಃ ಗೊತ್ತಿರಲಿಕ್ಕಿಲ್ಲ ನೀನಿಷ್ಟು ಮೋಸಗಾರನೆಂದು
ನಿನ್ನ ಮನಸ್ಸಲ್ಲಿ ನಾನಿಲ್ಲದೇ ಬೇರ್ಯಾರೋ ಇದ್ದರೆಂದು
ಮನುಷ್ಯರಿಗೆ ಮೋಸ ಮಾಡಿ ಗೆದ್ದೆನೆಂದು ಬೀಗಿ ಮುಂದೆ ಸಾಗಬೇಡ
ಹೃದಯಕ್ಕೆ ಮಾಡಿದ ಮೋಸ ನಿನ್ನನ್ನೆಂದೂ ಬಿಡಲ್ಲ ಇದ ಮರಿಬೇಡ
ಎಲ್ಲೋ ಹುಟ್ಟಿದ ಪ್ರೀತಿ ಎಲ್ಲೋ ಮಣ್ಣಾಗುತ್ತದೆ
ಯಾರೋ ಮಾಡಿದ ಮೋಸಕೆ ಯಾವುದೋ ಜೀವ ಬಲಿಯಾಗುತ್ತದೆ...😒