...

3 views

ಶ್ರಮಶಕ್ತಿ ಕಾರ್ಮಿಕ
ಶ್ರಮಶಕ್ತಿ ಕಾರ್ಮಿಕ
ರಚನೆ: ಭ್ರಂಗಿಮಠ ಮ.

ಹೊತ್ತಿನೂಟಕೆ
ನಿತ್ಯವೂ ಶ್ರಮಿಸಿ
ಮತ್ತದೇ ಗುಡಿಸಲಲಿ ಮಲಗಿದರೂ ಮನೆ ಮನೆಯ ಸ್ವಚ್ಛಗೊಳಿಸುವನೊಬ್ಬ
ಮನೆಯ ಕಾರ್ಮಿಕ

ಬೀದಿ ಬೀದಿಯ ತಿರುಗಿ
ರಸ್ತೆಯ ಮೇಲಣ ಕಸವನುಡಗಿ
ದಾರಿಯುದ್ದಕ್ಕೂ ಸ್ವಚ್ಚ ವಾತಾವರಣ ಸೃಷ್ಠಿಸುವನೊಬ್ಬ ಸಫಾಯಿ ಕಾರ್ಮಿಕ

ಎಸಿಯಲ್ಲಿ‌ಮಲಗುವ ಜನರ ಬಿಲ್ಡಿಂಗಗಳಿಗೆ ಕಲ್ಲು,ಉಸುಕು ಇಟ್ಟಂಗಿಯ ನೀಡಿ
ಬಿಸಿಲು ಮಳೆಯನ್ನದೇ ಬೆವರು ಸುರಿಸಿ ಮನೆ ಮಠ ಮಸೀದಿ ಕಟ್ಟುವನೊಬ್ಬ ಕಟ್ಟಡ ಕಾರ್ಮಿಕ

ಹಸಿದ ಒಡಲಿಗೆ ಅಡುಗೆಯ ಮಾಡಿ ಮನೆಮನೆಗೆ ತಿರುಗಿ
ಸುಚಿಯಾದ ಭೋಜನ ತಯ್ಯಾರಿಸಿ ಮತ್ತೆ ಉಪವಾಸ ಮಲಗುವವನೊಬ್ಬ ಕೊಡುವನೊಬ್ಬ ಅಡುಗೆ ಕಾರ್ಮಿಕ

ದವಾಖನೆಗಳಲ್ಲಿ ರೋಗಿಯ ಸೇವೆಗೆ
ಹಾಂಗು ಹಿಂಗಿಲ್ಲದೇ
ಹಗಲಿರುಳು ಸೇವೆ ಮಾಡುವವನೊಬ್ಬ ಶುಶ್ರತ ಕಾರ್ಮಿಕ

ವಾಹನಗಳ ನಡೆಸಿ
ಅಂಬುಲೆನ್ಸ,ಬಸ್ಸು,ರೈಲು,ಟ್ರಕ್ಕಲ್ಲಿ ನಿತ್ಯವೂ ಅಗತ್ಯತೆ ಪೂರೈಸುವನೊಬ್ಬ ನಿತ್ಯ ಕಾರ್ಮಿಕ

ವಿಶ್ವಕೆ ಆಹಾರ ಬೆಳೆದು
ಆಹಾರ ಕಾಣದೇ ಬೆಳೆದ ಬೆಳೆಗೆ ಬೆಲೆಯಿಲ್ಲದೇ ನೋವಲ್ಲೇ ಬೆಳಕು ಹುಡುಕುವನೊಬ್ಬ ಕೃಷಿ ಕೂಲಿ ಕಾರ್ಮಿಕ

ಕಲ್ಲು ಅಗೆದು ಕಟಿದು
ಆಕಾರ ನೀಡಿ
ಮನೆಗೆ ತಲುಪಿಸುವವನೊಬ್ಬ
ಗಣಿ ಕಾರ್ಮಿಕ

ಬಿಸಿ‌ಬಿಸಿಯ ಅಡುಗೆ ಮಾಡಿ ಊಟ ತಯ್ಯಾರಿದೆ ಎಂಬ ಹೋಟೆಲಲ್ಲಿ
ನಿತ್ಯವೂ ಶ್ರಮಿಸುವವನೊಬ್ಬ ಹೋಟೆಲು ಕಾರ್ಮಿಕ

ವಿವಿಧ ಗ ಸ್ಥರಗಳಲ್ಲಿ
ಕೆಲಸವ ಮಾಡುತ್ತಾ
ಕೂಲಿಯಾಗಿ ದುಡಿಯುವ ಶ್ರಮ ಶಕ್ತಿಯವನೊಬ್ಬ ಕೂಲಿ ಕಾರ್ಮಿಕ

ಕಾರ್ಯಾಂಗ ನ್ಯಾಯಾಂಗ ಶಾಸಕಾಂಗಕ್ಕೂ ತನ್ನ ಸೇವೆ ನೀಡುತ್ತ ಸಮಾಜದ ಸ್ಥಂಭಗಳಿಗೆ ಆಧಾರವಾಗುವವನೊಬ್ಬ ದೇಶ ಭಕ್ತಿ ಕಾರ್ಮಿಕ

ಕಾಯಕವೇ ಕೈಲಾಸವೆಂದು
ಕೈಲಾದಷ್ಟು ಶ್ರಮಶಕ್ತಿ ನೀಡಿ ಸಮಾಜದ ಆಧಾರ ಸ್ಥಂಬ ಕಾರ್ಮಿಕ.

ಮನೆಮನೆಗೂ ಪತ್ರಿಕೆ ಹಂಚಿ ಮುದ್ರಣಕ್ಕೂ ಶ್ರಮಿಸಿ ಸುದ್ಧಿ ಪ್ರಸಾರಕ್ಕೆ ದುಡಿಯುವನೊಬ್ಬ ಪತ್ರಿಕಾ ಕಾರ್ಮಿಕ

ಕಾರ್ಮಿಕಬದಿನಾಚರಣೆಯ ಶುಭಾಶಯಗಳು
ಇಂತಿ ನಿಮ್ಮ
ಭ್ರಂಗಿಮಠ ಮಲ್ಲಿಕಾರ್ಜುನ
ಕಪ್ಪು ಕೋಟಿನ ಕವಿ

..




...,,
© Mallikarjun Bhrungimath