...

13 views

ಮುಡಿಯ ಮಡಿಲಲ್ಲಿ ಜಗದೊಡೆಯ
ಮುಂಜಾನೆಯ ಸೊಬಗಿನಲಿ ಮಾದಕ ಪ್ರಕೃತಿ
ಆ ಸೃಷ್ಟಿಕರ್ತನ ಕೈಚಳಕದ ಸುಂದರ ಕಲಾಕೃತಿ
ಮೂಡಣದಲಿ ಮೂಡಿಹನು ಹೊಂಬಣ್ಣದಲಿ ರವಿ
ಕವನಗಳ ಬೆಸೆದಿಹನು ರಸವತ್ತಾಗಿ ಕವಿ

ಈ ಸೊಬಗ ನೋಡುತ ಮೈಮರೆದಿಹಳು ರಮಣಿ
ಸೂರ್ಯನು ಕಂಡನು ಮುಡಿಗೇರಿಸಿದಂತೆ ಮಣಿ
ಛಾಯಾಗ್ರಾಹಕನ ಹಸ್ತಚಾತುರ್ಯದ ಈ ಆಟ
ಪ್ರಕೃತಿಯ ಚೆಲುವಿನ ಸುಂದರ ಈ ನೋಟ

ಭುವಿಗೆ ಛಾವಣಿಯಂತೆ ಹಬ್ಬಿದೆ ಹಸಿರು
ಜೀವ ವೈವಿಧ್ಯಕೆ ನೀಡುತ ಜೀವದ ಉಸಿರು
ಪ್ರಕೃತಿಯ ಈ ನೋಟವೇ ಮನೆ ಮೋಡಿಗೈದಿದೆ
ನಿಂತಲ್ಲೇ ಕಲ್ಲಾಗುವಂತೆ ಮನಸೂರೆಗೊಂಡಿದೆ



© Sowmya Jayaram