...

9 views

ನನ್ನ ಮೊದಲ ಕವಿತೆ
ತನ್ನ ಮೊದಲ ಕವಿತೆಯನ್ನು ಎಲ್ಲಾ ಹೇಗೆ ಸ್ವೀಕರಿಸುತ್ತಾರೋ ಎಂದು ಹೆದರಿದ ಮನಸ್ಸಿನ ಭಾವನೆಗಳ ಕವಿತೆ ಇದಾಗಿದೆ.

ನನ್ನ ಮೊದಲ ಕವಿತೆ
-------------------------

ಅಮ್ಮ ಮೆಚ್ಚಿದರು, ಅಪ್ಪ ಮೆಚ್ಚಿದರು
ನನ್ನ ಮುದ್ದು ತಮ್ಮ ಮೆಚ್ಚಿದನು
ಆದರು ಏನೋ ಕಳವಳ ಮನದಲಿ
ಜನ ಮೆಚ್ಚುವರೆ ಎನ್ನ ಕವಿತೆಯ,
ಹೇಳೆ ಮನಸೆ ನೀ ಹೇಳು
ಹೇಳೆ ಮನಸೆ ನೀ ಹೇಳು

ನೆಂಟರೇನನ್ನುವರೋ?
ಬಂಧು ಬಳಗ ಬಯ್ಯುವರೋ?
ಸ್ನೇಹಿತರು ಠೀಕೆಮಾಡುವರೋ? ಗೇಲಿಮಾಡುವರೋ ಏನೋ?
ಅರ್ಥಮಾಡಿಕೊಳ್ಳುವರೋ?
ಅರ್ಥೈಸಿಕೊಳ್ಳಲು ನಿರಾಕರಿಸುವರೋ?
ಹೇಗೆ ತೆಗೆದುಕೊಳ್ಳುವರೋ, ನನ್ನೀ ಪ್ರಯತ್ನವನು?

ಹಕ್ಕಿಯಂತೆ ಹಾರಲುಹೂಗಿ ಕೆಳಗೆ ಬೀಳುವೆನೋ! ಅಥವಾ
ನನ್ನೀ ಪುಟ್ಟ ಪ್ರಯತ್ನದಿಂದ ರೆಕ್ಕೆ ಕಟ್ಟಿಕೊಳ್ಳುವೆನೋ!
ಏನಾಗಬಹುದೆಂಬ ಭೀತಿ ಇದೆ ಎನ್ನಲಿ, ಹಾಗೆಯೆ
ಏನಾಗಬಹುದೆಂಬ ಕಾತುರ ಇದೆ ಎದೆಯಲಿ

ವಿಷಯವಂದೆ ಆದರು, ಭಾವ ಬಗೆಬಗೆ
ಅತ್ತಲು ಹೊಗುವುದು, ಇತ್ತಲು ಬಾಗುವುದು
ನಿಲ್ಲದು ಒಂದೆಡೆ ಏನುಮಾಡುವುದು
ಹೇಗೆ ಅರ್ಥೈಸುವುದು?, ಇದನು
ಹೇಳೆ ಮನಸೆ ನೀ ಹೇಳು
ಏನುಮಾಡುವುದು
ಹೇಗೆ ಅರ್ಥೈಸುವುದು?, ಇದನು
ಹೇಳೆ ಮನಸೆ ನೀ ಹೇಳು

ನಿಮ್ಮ ಆರ್ಶಿವಾದವಿದ್ದರೆ ಎಲ್ಲರು ಮೆಚ್ಚುವರು ಜಗದಲಿ
ನೆಂಟರಿಷ್ಟರು ಇಷ್ಟಪಡುವರು, ಬಂಧು ಬಳಗ ಭೇಶ್ ಎನ್ನುವರು
ಸ್ನೇಹಿತರು ಸಂತಸಗೊಳ್ಳುವರು, ಬೆನ್ನುತಟ್ಟುವರು ಎನಗೆ
ಜನರ ಹಾರೈಕೆ ಜರ್ನಾಧನನ ಹಾರೈಕೆಯಾಗುವುದು ಎನ್ನ ಬಾಳಲಿ

ಹರಸಿ ನನ್ನ ಈ ಮೊದಲಕವಿತೆಯನು
ಪ್ರೊತ್ಸಹಿಸಿ ಬೆಳೆಸಿ ಉಳಿಸಿ ನನ್ನೀ ಕವಿತೆಯನು
ಬೆನ್ನುತಟ್ಟಿ ಮುನ್ನಡೆಸಿ ನನ್ನ ಕವಿತೆಯನು
ಇದು ನನ್ನ ಮೊದಲ ಕವಿತೆ, ಈಗ ಇದು ನಿಮ್ಮ ಕವಿತೆ


© All Rights Reserved