...

8 views

ಅಂತ್ಯವಿಲ್ಲದ ಸಾಗರ
ಬಾಳು ಎಂಬ ಸಾಗರದಿ ಏನೋ ದ್ವಂದ್ವವಿದೆ.
ಬದುಕೆಂಬ ಪಯಣದಿ ಆಸೆಯು
ಚೆಲ್ಲಿದೆ.
ಮನಸಿನ ಅಂಗಳದಲ್ಲಿ ದುಗುಡವು ಚಿಮ್ಮಿದೆ.
ಕೊರತೆ ಎಂಬ ಸವಾಲು ಪಳಗಿಸಿ ಸಾಗುತಿದೆ ಸಮರ.
ಎಂದೆಂದಿಗೂ ತಿಳಿಯದು ಇದು ಅಂತ್ಯವಿಲ್ಲದ ಸಾಗರ.


ಬರಿ ಮಾತಿನ ಮುಖವಾಡದಿ ಸಾಗುತಿದೆ ಜೀವನ.
ಮೂಡಿಹುದು ಕುರುಡು ಕಾಂಚನದ ನರ್ತನ.
ಹಗಲು ರಾತ್ರಿಗಳ ಉಯ್ಯಾಲೆಯಲಿ ಕಾಣದಿ ನಯನ.
ಸಾಗುತಿದೆ ಸ್ವಾರ್ಥದ ಪರಿಪಾಲನೆಯ ಪಯಣ.

ಕರುಳು ಎಂಬ ನಂಟಿನಲಿ ಅಂಟಿಹುದು ಪ್ರೀತಿಯು.
ಹಿರಿಯರ ಆಶ್ರಯದಿ ಅರಿತಿಹುದು ನೀತಿಯು.
ಸಾಮರಸ್ಯದ ಬದುಕಿನಲಿ ಕಳೆದಿಹುದು ಭೀತಿಯು.
ಸಾಂಪ್ರದಾಯದ ಆಚರಣೆಯಲಿ
ಮೂಡಿಹುದು ಶಾಂತಿಯು


ಸ್ವಾರ್ಥದ ಅಂಗಡಿಯಲಿ ಜಗವನೇ ಕೊಳ್ಳುವವರು ಯಾರೋ...
ಬಡತನವೆಂಬ ಬೇಗೆಯಲಿ ಬಂಧನ ಪ್ರೀತಿಯ ಗಳಿಸುವವರು ಯಾರೋ...

ಇದು ಅಂತ್ಯವಿಲ್ಲದ....... ಸಾಗರ ಇದು ಅಂತ್ಯವಿಲ್ಲದ ಸಾಗರ..