...

2 views

ಕ್ಷಮಾಧಾತ್ರಿಯು ಮುನಿಸಿದರೆ.....
ಸಿಗಿದಾಯಿತು ಒಡಲು ನೆಲ ಜಲ ಬಗೆಯ,
ಬರಿದಾಯಿತು ಪ್ರಕೃತಿಯ ಹಸಿರು
ಸೀರೆಯ ಹೊಳಪು,
ಕುಡಿದಾಯಿತು ನೀರು ಅಂತರ್ಜಾಲವಾ ಕೊರೆದು,
ಕ್ಷಮಾಧಾತ್ರಿಯದೆ ನೀನು ಇವೆಲ್ಲವ ಮರೆತು.

ವಿಷಗಾಳಿಯ ಹರಡಲು ಕಾರ್ಖಾನೆಯ ಬಿಲದಿ,
ಕಸರಾಶಿಯ ಸುರಿದರು ಜಾಲಾಮುಲದ ತಟದಿ,
ವೃಕ್ಷಕುಲವು ನಶಿಸಲು ಮಾನವನ ಹಠದಿ,
ಕ್ಷಮಾಧಾತ್ರಿಯದೆ ನೀನು ಇವೆಲ್ಲವ ಮರೆತು.

ನೀರ ಮೂಲವನ್ನೇ ತಿರುಗಿಸಿದರು,
ಮಣ್ಣಿನ ಫಲವತ್ತತೆಯ ಕೆಡಿಸಿದರೂ,
ಪರಿಸರದ ಸಮತೋಲನೆಯ ಕೆಡಿಸಿದರೂ,
ಕ್ಷಮಾಧಾತ್ರಿಯದೆ ನೀನು ಇವೆಲ್ಲವ ಮರೆತು.

ಬೆಳಕಿನ ಹಿಂದೆ ನಿಶೆಯ ಛಾಯೆಯಿರಲು,
ಆನಂದದ ಛಾವಾನಿಯಲ್ಲಿ ನೋವಿನ ಬಿರುಕಿರಲು,
ಕ್ರಿಯೆಗೆ ವಿರುದ್ಧವಾದ ಪ್ರತಿಕ್ರಿಯೆಯಿರಲು,
ಅರ್ಥೈಸುವನೆಂದು ಮನುಜ ಈ ಕಠೋರ ಸತ್ಯವ,
ನೀನು ಕ್ಷಮಾಧಾತ್ರಿಯದೆ ಹೌದು!
ಸೇಡಿನ ಜ್ವಾಲಾಮುಖಿಯಾಗಿ ಹೌದು!