...

7 views

ಅಯೋ ಎಂಬ ದುರಂತ
ಅಯೋ ಎಂತಹ ದುರಂತ

ನೋಡು ತಾಯಿಯೇ ನಾಳೆ
ಆಂಗ್ಲ ಕಲಿತವರ ಆಡಂಬರ
ನಮ್ಮದೂರ ತಳ್ಳುವರು ತಾಯಿ
ಕನ್ನಡ ಕಲಿತ ಈ ಬಡವರ

ಆಂಗ್ಲಭಾಷೆಯ ವ್ಯಾಮೋಹಕ್ಕೆ
ಒಳಗಾದವವರೇ ಇಂದು
ಹಂಚಿಕೊಳ್ಳುವವರು ವೇದಿಕೆ
ತಮ್ಮ ಠಿವಿಯಿಂದಲೇ ಬಂದು

ಹರಿದ ಬಟ್ಟೆಯಂತೆ ಇವರು
ನಿನಗಿಂದು ಹೊಗಳುವರು
ಕೆಳಗೆ ಕುಳಿತು ನಮ್ಮವರು
ಮೆಚ್ಚಿ ಚಪ್ಪಾಳೆ ತಟ್ಟುವರು

ಅವಮಾನಕ್ಕೆ ಒಳಗಾಗುತ್ತಿಹರು
ನಿನ್ನಯ ಹಿತ ಚಿಂತಕರು
ವೇದಿಕೆಯಲಿ ರಾರಾಜಿಸುವರು
ನಾಳೆ ನಿನ್ನಯ ಹಂತಕರು

ನಿನ್ನ ಮನ ನೋಯಿಸುತ್ತಿದ್ದರು
ನಾವುಪ್ರತಿರೋಧವು ತೋರದೆ
ಮೌನವಾಗಿರುವೆವು ತಾಯಿ
ನಮಗೆ ಮಾತುಗಳು ಬಾರದೆ

ಇವರಿಗೆ ಕನ್ನಡ ಮಾತನಾಡಲು
ಮಾಡಬೇಕಾಗಿದೆ ಬಲವಂತ
ವೇದಿಕೆ ನೀಡಿ ಗೌರವಿಸುವುದು
ಇದು ಬಾಳಿನಲೆಂತಹ ದುರಂತ

ಚಂದು ವಾಗೀಶ ದಾವಣಗೆರೆ