...

3 views

ಮನಸೆಳೆಯೋ ಪುಷ್ಪ 💐💐
ದಿನಕರನುದಿಪ ಸುಸಮಯದಿ
ಅಂದದಿ ಅರಳಿರುವ ಸುಮಾ
ಆಕರ್ಷಿಸಿತು ಎಲ್ಲರ ಸುಮನ
ನೋಡುಗರ ನಯನದಿ ಸಂತಸ
ಹಿತವಾಯಿತು ಮನದಿ ಉಲ್ಲಾಸ


ಭೇದ ಭಾವವ ಮರೆತು
ಕಾಣುವ ಎಲ್ಲರ ಸಮಾನ
ಎಲ್ಲರಿಗೂ ಹಂಚು ಪ್ರೀತಿಯ
ಸರಿಸಮಾನರೆಂಬ ಐಕ್ಯತೆಯ
ಸಂಭ್ರಮದಿ ನಲಿಯಿತಿಂದು







ಮನದ ನೋವು ಮರೆಸಿತು
ಮುದದಿ ನಗುವ ತರಿಸಿತು
ದಿನವಿಡೀ ಕಂಪನು ಸೂಸಿತು
ಮರುಕಪಟ್ಟಿತು ಸಂಜೆಯಲಿ
ಜೀವನವೇ ಇಷ್ಟೇ ಆಯಿತು.

🌹💐🥀🌺🌷🪷🌸💮🌸🪷🌻