ನಗೆ(Smile)
ನಗೆ
ಕವಿತೆಯ ರಚನೆ :ಭೃಂಗಿಮಠ
ಓ ನಗೆ
ನೀನೆಷ್ಟು ಶಕ್ತಿಯುಕ್ತ
ನೊಂದ ಮನಕೆ
ಕ್ಷಣಾರ್ಧದಲ್ಲೇ ಸಂತೋಷದ ಔಷದಿಯ ನೀಡುವೆ
ಬಾಲ್ಯದ ಬೊಚ್ಚು ಬಾಯಿಯಲ್ಲಿ
ಸ್ವಚ್ಚಂದದ ಶುದ್ದತೆಯ ನಗೆಬೀರಿ ಬದ್ದತೆಯ ಮೆರೆಸುವೆ
ತಂದೆ ತಾಯಿಗೆ ಆನಂದ ನೀಡುವೆ
ಗೆಳೆಯರೊಡನೆ ಸ್ನೇಹಣದ ಬೀಜ ಬಿತ್ತುವೆ
ಯೌನದಲ್ಲಿ ಪ್ರೀತಿಗೆ ಮುನ್ನುಡಿ ಬರೆಯವೆ
ಸ್ನೇಹದ ಕಡಲಲ್ಲಿ ನೀರಾಗಿ
ಬದುಕ ದೋಣಿಯ ವಿಶ್ವಾಸ ಗಟ್ಟಿಯಾಗಿಸುವೆ
ಓ ನಗೆಯೇ ನಿನ್ನ ಆ ಶಕ್ತಿಗೆ ಸೋಲದವರಿಲ್ಲ
ನೀನಿಲ್ಲದಿರೆ ಬದುಕೇ ನಶ್ವರ
ಈಶ್ವರನ ಕೃಪೆಯೂ ಇಲ್ಲ
ಯಾರೂ...