...

9 views

ಅಸಾಧ್ಯ ನಕ್ಷತ್ರ ಎಣಿಕೆ..‌
ಬದುಕಿನ ತಿರುಳು ಅರಿಯದೇ
ಗೊಂದಲ ಕಾಡಿದಾಗ ಸುಮ್ಮನೆ
ಕೂರುವೆ ನಕ್ಷತ್ರ ಎಣಿಸಲು ಯತ್ನಿಸುತ್ತ..
ಆಗದು ಎಣಿಸಲು ಅಸಾಧ್ಯವದು
ಎಷ್ಟು ಪ್ರಯತ್ನಿಸಿದರೂ ನಿರಾಶೆಯೇ
ಕಟ್ಟಿಟ್ಟ ಬುತ್ತಿ..
ಮುಂದೆ ಲೆಕ್ಕ ಮಾಡುತ್ತಾ ಹೊರಟಂತೆ
ಹಿಂದಿನದು ಮರೆತೇ ಹೋಗುತ್ತದೆ ನಕ್ಷತ್ರ ಎಣಿಕೆ..
ಅಷ್ಟೇ ಅಲ್ಲವೇ ಬಾಳೂ ಸಹ..
ಹಿಂದಿನದು ಹಿಂದೆಯೇ..ನಾಳಿನದು ನಾಳೆಗೆ
ಕೆಲವೊಂದು ಮರೆತು, ಕೆಲವೊಮ್ಮೆ ನೆನಪಿಸಿ
ನಡೆಯಬೇಕು ಪ್ರಯತ್ನ ವ್ಯರ್ಥ ಎನಿಸಿದರೂ
ಸಾರ್ಥೈಕ್ಯತೆ ಕಾಣಲು ಈ ಮನುಜ ಜನುಮದ ಬದುಕು....
👀ಪೂರ್ವವಾಹಿನಿ