16 views
ಜಡೆಕವನ...
ಒಲವಿದು ಒಂಟಿಯಾಗಿದ್ದಿದ್ದರೆ ಚಂದವಿರುತಿತ್ತು
ಚಂದವಿಂದೆತ್ತು ಬದುಕುವುದಕ್ಕೂ ಕಾರಣವಿತ್ತು
ಕಾರಣವೇ ಇರದೆ ಒಲವು ದೂರಾಗಿ ಕುಳಿತಿತ್ತು
ಕುಳಿತು ಕನಸುಗಳ ಹೆಣೆದು ಹುಸಿನಗು ಬೀರಿತ್ತು
ಬೀರುತ ಬರಿದಾದ ಒಲವನು ನೆನೆದು ಸಾಗುತಿತ್ತು
ಸಾಗುವ ಹಾದಿಯಲಿ ಕಣ್ಣೀರೇ ಜೊತೆಯಾಗಿತ್ತು
ಜೊತೆಯಾದ ಒಲವೂ ಕೈ ಜಾರಿ ಚೂರಾಗಿತ್ತು
ಚೂರಾದ ಮನಕೆ ಸಂತೈಸಲಾರೂ ಇಲ್ಲದಾಗಿತ್ತು
ಇಲ್ಲದ ಒಂಟಿ ಒಲವಿಗೆ ಓಲೈಕೆ ಇಂದು ಬೇಕಿತ್ತು
ಬೇಕಾದ ಮನವೇ ದೂರನಿತ್ತು ಬೇರೆಯಾಗಿತ್ತು
ಬೇರೆಯಾದ ಹೃದಯಕೆ ಬಲವು ತುಂಬಬೇಕಿತ್ತು
ತುಂಬಿದ ಕಂಗಳಿಂದು ಕಣ್ಣೀರಿಲ್ಲದೆ ಬರಿದಾಗಿತ್ತು
ಬರಿದಾದ ಒಲವಿಗೇಕೋ ಬದುಕಿನ್ನು ಸಾಕಾಗಿತ್ತು
ಸಾಕಾಗಿ ಸಂಭ್ರಮವು ಸೊರಗಿ ಒಂಟಿಯಾಗಿತ್ತು
ಒಂಟಿಯಾದ ಒಲವಿಗೂ ನೆಪವೊಂದು ಸಾಕಿತ್ತು
ಸಾಕಾಗದ ಸವಿನೆನಪುಗಳು ಮತ್ತೆ ಮತ್ತೆ ಕಾಡಿತ್ತು
ಕಾಡುವ ಕಳೆದ ಕ್ಷಣ ದಾಳಿ ಮಾಡಲು ಕಾದಿತ್ತು
ಕಾದಿಹ ಹೃದಯ ಮಿಡಿಯುವುದ ಮರೆಯುತಿತ್ತು
ಮರೆತು ಬದುಕುವುದಕೆ ತಾಲೀಮು ನಡೆಸಿತ್ತು
ನಡೆಸಿ ಉಸಿರ ಬಿಡುವುದಕಿಂದು ಅಣಿಯಾಗಿತ್ತು
#Kannada #kannadapoem #vijaykumarvm #ಜಡೆಕವನ #ವಿಬೆಣ್ಣೆ
© ವಿಜು ✍ 💞
ಚಂದವಿಂದೆತ್ತು ಬದುಕುವುದಕ್ಕೂ ಕಾರಣವಿತ್ತು
ಕಾರಣವೇ ಇರದೆ ಒಲವು ದೂರಾಗಿ ಕುಳಿತಿತ್ತು
ಕುಳಿತು ಕನಸುಗಳ ಹೆಣೆದು ಹುಸಿನಗು ಬೀರಿತ್ತು
ಬೀರುತ ಬರಿದಾದ ಒಲವನು ನೆನೆದು ಸಾಗುತಿತ್ತು
ಸಾಗುವ ಹಾದಿಯಲಿ ಕಣ್ಣೀರೇ ಜೊತೆಯಾಗಿತ್ತು
ಜೊತೆಯಾದ ಒಲವೂ ಕೈ ಜಾರಿ ಚೂರಾಗಿತ್ತು
ಚೂರಾದ ಮನಕೆ ಸಂತೈಸಲಾರೂ ಇಲ್ಲದಾಗಿತ್ತು
ಇಲ್ಲದ ಒಂಟಿ ಒಲವಿಗೆ ಓಲೈಕೆ ಇಂದು ಬೇಕಿತ್ತು
ಬೇಕಾದ ಮನವೇ ದೂರನಿತ್ತು ಬೇರೆಯಾಗಿತ್ತು
ಬೇರೆಯಾದ ಹೃದಯಕೆ ಬಲವು ತುಂಬಬೇಕಿತ್ತು
ತುಂಬಿದ ಕಂಗಳಿಂದು ಕಣ್ಣೀರಿಲ್ಲದೆ ಬರಿದಾಗಿತ್ತು
ಬರಿದಾದ ಒಲವಿಗೇಕೋ ಬದುಕಿನ್ನು ಸಾಕಾಗಿತ್ತು
ಸಾಕಾಗಿ ಸಂಭ್ರಮವು ಸೊರಗಿ ಒಂಟಿಯಾಗಿತ್ತು
ಒಂಟಿಯಾದ ಒಲವಿಗೂ ನೆಪವೊಂದು ಸಾಕಿತ್ತು
ಸಾಕಾಗದ ಸವಿನೆನಪುಗಳು ಮತ್ತೆ ಮತ್ತೆ ಕಾಡಿತ್ತು
ಕಾಡುವ ಕಳೆದ ಕ್ಷಣ ದಾಳಿ ಮಾಡಲು ಕಾದಿತ್ತು
ಕಾದಿಹ ಹೃದಯ ಮಿಡಿಯುವುದ ಮರೆಯುತಿತ್ತು
ಮರೆತು ಬದುಕುವುದಕೆ ತಾಲೀಮು ನಡೆಸಿತ್ತು
ನಡೆಸಿ ಉಸಿರ ಬಿಡುವುದಕಿಂದು ಅಣಿಯಾಗಿತ್ತು
#Kannada #kannadapoem #vijaykumarvm #ಜಡೆಕವನ #ವಿಬೆಣ್ಣೆ
© ವಿಜು ✍ 💞
Related Stories
13 Likes
0
Comments
13 Likes
0
Comments