...

3 views

ಮುಗಿದ ದಿನ..
ಮುಗಿದ ದಿನದ ಪಯಣದಲಿ .


ಏನೆಲ್ಲ ಸಂಗತಿಗಳು ಮುಳಗಲು ಕತ್ತಲಹೊದಿಕೆಯಲಿ...ನಾನು ನಾನು ಎನುತ ನಲಿದು ಕಾಲು ಸೋತು ಇರುಳಲ್ಲಿ ಬದುಕು ನೋವನರಳಿಕೆಯಲಿ... ಕನವರಿಕೆಯ ಕುದುರೆ ಏರಿ ಬರುತಿಹಳು ನಿದಿರಾದೇವಿ ಮನಸಿಗೆ ಮದಿರೆ ನೀಡಿ ಮಲಗೆನ್ನುತಿಹಳು..
ಹಗಲಲ್ಲಿ ಹರಿವ ನೀರಂತೆ ಈ ಮನವು
ಕಂಡದ್ದನ್ನು ಬಳಿದು
ಇರುಳಲ್ಲಿ ಬದುಕು ವೈರಾಗ್ಯವಂತೆ...
ಬೆಳಕಲ್ಲಿ ಬೆರಗುಮೂಡಿಸಿದ ಭಾನು
ಇರುಳಲ್ಲೇಕೆ ಮುಳುಗಿ ಭಯವ ನೀಡುವುದು...
ಮನಸೆಂದರೆ ಹೀಗೆ
ದಿನದೊಂದಿಗೆ ಹುಟ್ಟಿ
ಆಸೆಗಳ ಹಿಮೆಟ್ಟಿ ಒಮ್ಮೆ
ಮಗದೊಮ್ಮೆ ಇರುಳ
ಮಸುಕಿನಂತೆ ಮಂಕಾಗಿ
ತಿರುಗುವುದು ಹಗಲುರಾತ್ರಿಯ ಚಕ್ರದಂತೆ.....
ಮನಕ್ಕೊಂದು ಕಿವಿಮಾತು...
ಮನ-ಕೊಂದು ಬದುಕಿದರೆ ಅರ್ಥ ವಿಹುದೇ?
ಬದುಕು ಮನ ನೀನು
ಬಯಸಿದಂತೆ...
ಬೆಳಗೊಂದಿಗೆ ಬೆಳಗಿ
ಕತ್ತಲೆಯಲಿ ಕನಸುಕಟ್ಟಿ
ದಿನದ ಜನನದಲಿ ನನಸು ಕಾಣುತ ನೀ ನಗುತಿರು. ....