ಬಹು ಕಾಫಿಯಾ ಗಝಲ್
ಸ್ಫುರಿಸುತ್ತಿಹ ಅನುಭಾವಕ್ಕೆ ಸಂಶ್ರಯಗಳು ನಿಲುಕುತ್ತಿಲ್ಲ ಅಳುಪಿಟ್ಟರೇನು ಫಲವಿದೆ
ತಿತಿಕ್ಷೆಯಿಲ್ಲದಿಹ ಹೃದಯಕೆ ಮನಸುಗಳು ಬೆಸೆಯುತ್ತಿಲ್ಲ ಒಲವಿಟ್ಟರೇನು ಲಾಭವಿದೆ
ನಲಿವನ್ನು ಕಬಳಿಸಿದ ಬಾಳ ಪಯಣದಲ್ಲಿ ಕಾಣುತ್ತಿದೆ ಖುಷಿಯು ಮರೀಚಿಕೆಯಾಗಿ
ಅಡರುತ್ತಿಹ ಚಿತ್ತಕ್ಲೇಶಕೆ ತಡಪುಗಳು ಸಮನಿಸುತ್ತಿಲ್ಲ ಯೋಗವಿದ್ದರೇನು ಗರುವವಿದೆ
ಬಂಧಗಳ ಶರಪಂಜರದಿ ನಲುಗಿದೆ ತಪ್ತ ಮನ ಅಸುವನರ್ಪಿಸಿದರೂ ಅತೃಪ್ತವಾಗಿ
ಹಸನಲ್ಲದಿಹ ಕಷ್ಟಾತ್ಮಕೆ ಕನಸುಗಳು ಕೃಪೆದೋರುತ್ತಿಲ್ಲ ಸಹಸವಿದ್ದರೇನು ಸಾಫಲ್ಯವಿದೆ
ಕಲ್ಪಮೇಘದ ಮರೆಯಲ್ಲಿ ಹುಡುಕುತ ಬಳಲಿರುವೆನು ಭರವಸೆಗಳ ವಿದ್ಯೋತವನ್ನು
ಸದಯವಿಲ್ಲದಿಹ ನೇತ್ರಕೆ ಅನುಪತ್ಯಗಳು ತೋರುತ್ತಿಲ್ಲ ಸನಿಹವಿದ್ದರೇನು ಪದುಳವಿದೆ
ಕಂಗಳಲಿ ಕವಿದ ಕತ್ತಲೆಯಿಂದೆಡರುತ್ತಿದೆ ಕಾಲ್ಗಳು ಕ್ಷೀಣಿಸುತ್ತಿದೆ 'ವಿಜಯ'ದ ಅಭಿಧ್ಯೆ
ಧೃತಿಯಿಲ್ಲದಿಹ ಚಿದ್ರೂಪಕೆ ನಲ್ನುಡಿಗಳು ಪಥ್ಯವಾಗುತ್ತಿಲ್ಲ ವಪುವಿದ್ದರೇನು ಚೆಲುವಿದೆ
© ವಿಜಯ್ 💫