...

9 views

೧.ವಸಂತ ಕಾಲ,೨.ದುಡಿವ ರೈತ
ದತ್ತ ಪದ:೧.ನೂತನ
ಶೀರ್ಷಿಕೆ: ವಸಂತ ಕಾಲ
*************************
ವಸಂತ ಕಾಲದಲ್ಲಿ ಮಾಮರದಲ್ಲಿ ಹೂವು ನೂತನ
ಅದರ ಸೊಬಗಿಗೆ ಕೋಗಿಲೆ ಹಾಡಿತು ಸವಿಗಾನ
ಆ ಗಾನಕ್ಕೆ ಭಾಸ್ಕರನು ಸೂಸಿದನು ಹೊಸಕಿರಣ
ಹೊಂಗಿರಣಕ್ಕೆ ಭೂದೇವಿ ನಲಿದಾಡಿದಳು ಪ್ರತಿಕ್ಷಣ
ಭೂ ದೇವಿಯ ಚೆಲುವಿಗೆ ಸೋತಿತು ಈ ಮೈಮನ
ಹೃದಯದಲ್ಲಿ ಮೂಡಿತು ಒಲವಿನ ಸಿಹಿ ಸಿಂಚನ.

೨.ಜೀವಸಿರಿ
ಶೀರ್ಷಿಕೆ: ದುಡಿವ ರೈತ
************************
ಹೊಲ,ಗದ್ದೆಗಳಲ್ಲಿ ಬೆವರು ಸುರಿಸಿ ದುಡಿವ ರೈತ
ದವಸ, ಧಾನ್ಯಗಳ ಮೊಳಕೆ ಬರಿಸಿ ಉತ್ತಿ ಬೆಳೆವಾತ
ಜೀವಸಿರಿಯ ನಂಬಿ ದಿನ ಕಳೆವ ಜೀವನ ಪರ್ಯಂತ
ಎಲ್ಲರಿಗೂ ಅನ್ನ ಭಾಗ್ಯವ ಕಲ್ಪಿಸುವ ದೇವನಾತ
ರೈತನಿಲ್ಲದ ಭೂಮಿ ಬರೀ ಬರಡಂತ
ತಿಳಿದು ರೈತನಿಗೆ ಕೊಡಬೇಕು ಗೌರವ ಅನವರತ.