...

8 views

ಲೇಟೆಸ್ಟ್ ಭಿಕ್ಷುಕರು
ಲೇಟೆಸ್ಟ್ ಭಿಕ್ಷುಕರು
ಇವರು ರೇಟೆಡ್ ಭಿಕ್ಷುಕರು

ಜಯಂತಿಗಳ ಹೆಸರಲ್ಲಿ
ಕಛೇರಿ ಕಛೇರಿಗೆ ತಿರುಗಿ
ಹಣ ವಸೂಲಿ ಮಾಡಿ
ನಸೆಯಲ್ಲೇ ತೂಕಡಿಸುವ ಪ್ಲೇಟಿಲ್ಲದ ಭಿಕ್ಷುಕರೋ ಇವರು moderate ಭಿಕ್ಷುಕರೊ..

ಮಾಧ್ಯಮದ ನೆಪದಲ್ಲಿ
ಸುದ್ದಿಯ ವಿಷಯದಿ ಹೆದರಿಸಿ
ಕದ್ದು ಸಂದ್ಯಾಗ ಹಣ ಪಡೆಯುವ secret ಭಿಕ್ಷುಕರೋ ಇವರು
ಸಿಕ್ಕಾಂಗೇ ಭಿಕ್ಷುಕರೋ

ವಾಹನಗಳನು ತಡೆದು
ಕಾನೂನು ದುರಪಯೋಗಿಸಿ ಸಂಚಾರಿಗಳಿಂದ ವಸೂಲಿ ಮಾಡಿ ಜೇಬು ತುಂಬಿಸಿಕೊಳ್ಳುವವರು ಲಂಚಕೋರ ಬೀಕ್ಷುಕರೋ
ಇವರು ಮಂಚಕೋರರಿಗೂ ಕನಿಷ್ಡ ಭಿಕ್ಷುಕರೋ..

ರಸ್ತೆ ನಿರ್ಮಾಣದಲಿ
ಕಂಟ್ರಕ್ಟರ್ಗಳಿಂದ ಪ್ರತಿ ಕೆಲಸಕ್ಕೂ ಇಂತಿಷ್ಟು ಪಡೆಯುವ ಶಾಸ.....ಕ..ಎಮ್ ಪಿ ಇವರು ಮಾಮೂಲೀ ಭಿಕ್ಚುಕರೋ ಇವರು ಮೈ ಮಾರಿಕೊಂಡವರಿಗಿಂತಲೂ ಕನಿಷ್ಠ ಭಿಕ್ಷುಕನೋ..

ಚುನಾವಣೆ ಬಂದಾಗ
ಲೀಡರ್ಗಳ ಮನೆ ಮನೆ ತಿರುಗಿ
ನೋಟಿನ ಕಂತೆಯನ್ನೂ ನುಂಗಿ ಮತದಾರರ ಹೆಸರು ಹೇಳಿ ಹಣ ಪಡೆಯುವವರೂ
ಕೀಳದರ್ಜೆಯ ಭಿಕ್ಷುಕರೋ ಇವರು..

ಓದದ ವಿದ್ಯಾರ್ಥಿಗೂ
ಹಣಪಡೆದು ಅಂಕ ನೀಡಿ
ಮತಿಯಿಲ್ಲದವರಿಗೂ ಮತಿವಂತರೆಂದು ಬಿರುದು ನೀಡಿ ಹಣ ಪಡೆಯುವವ ಚೋರ ಭಿಕ್ಷುಕರೋ...

ಕೊರೋನ ಸಂಕಷ್ಟದಲ್ಲೂ
ರೋಗಿಗಳಿಗೆ ಸುಳ್ಳು ಹೇಳಿ ಬಿಲ್ಲು ಪಡೆಯುವವರೂ
ಕಿತಾಪತಿ ಭಿಕ್ಷುಕರೋ ಇವರು ಕಿತಾಪತಿ...
© Mallikarjun Bhrungimath